ಕರ್ನಾಟಕ

karnataka

ETV Bharat / state

ವಿಧಾನಸಭಾ ಚುನಾವಣೆ 2023: ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಗೊಳಿಸಿದ ಆಮ್​ ಆದ್ಮಿ - karnataka political news

ರಾಜ್ಯದ 224 ಕ್ಷೇತ್ರಗಳಲ್ಲೂ ಆಪ್ ಸ್ಪರ್ಧೆ ಮಾಡಲು ಮುಂದಾಗಿದ್ದು ಇಂದು ಮೂರನೇ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದೆ.

aam-aadmi-party-released-the-third-list-of-candidates
ಆಮ್​ ಆದ್ಮಿ ಪಕ್ಷದ ಮೂರನೇ ಅಭ್ಯರ್ಥಿ ಪಟ್ಟಿ ಬಿಡುಗಡೆ

By

Published : Apr 10, 2023, 5:28 PM IST

ಬೆಂಗಳೂರು:ಈಗಾಗಲೇ ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಆಪ್ ಸೋಮವಾರ ಮೂರನೇ ಪಟ್ಟಿಯನ್ನು ಪ್ರಚಾರ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಎಎಪಿ ಮುಖಂಡ ಬ್ರಿಜೇಶ್ ಕಾಳಪ್ಪ ಬಿಡುಗಡೆ ಮಾಡಿದರು.

ಆಮ್ ಆದ್ಮಿ ಪಾರ್ಟಿಯು ವಿಧಾನಸಭೆ ಚುನಾವಣೆಗೆ ತನ್ನ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಪ್ರಸ್ತುತ, ಎಎಪಿಯು ಅತಿ ಹೆಚ್ಚು ಅಭ್ಯರ್ಥಿಗಳನ್ನು ಘೊಷಣೆ ಮಾಡಿರುವುದು ಮಾತ್ರವಲ್ಲ, 168 ಕ್ಷೇತ್ರಗಳ ಜನತೆಗೆ ಅತ್ಯುತ್ತಮ ಮತ್ತು ಪ್ರಾಮಾಣಿಕ ಆಯ್ಕೆ ನೀಡಿದೆ. ಅತಿ ಹೆಚ್ಚು ರೈತರು, ಯುವಕರು ಮತ್ತು ಮಹಿಳಾ ಅಭ್ಯರ್ಥಿಗಳನ್ನು ಇರುವುದು ನಮ್ಮಲ್ಲೇ ಎಂದು ಪ್ರಚಾರ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಆಮ್​ ಆದ್ಮಿ ಪಕ್ಷದ ಮೂರನೇ ಅಭ್ಯರ್ಥಿ ಪಟ್ಟಿ ಬಿಡುಗಡೆ

ನಮ್ಮ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ ತಿಳಿಯಲು ನಾವು ನೋಡಿರುವುದು ಅವರ ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಯನ್ನೇ ಹೊರತು ಅವರ ಹಣಬಲ ಮತ್ತು ತೋಳ್ಬಲವನ್ನಲ್ಲ. ಮೂರೂ ಹಳೇ ಪಕ್ಷಗಳನ್ನು ನೋಡಿ, ಅವರ ಮೋಸ ಅನುಭವಿಸಿ ರಾಜ್ಯದ ಜನತೆಗೆ ಸಾಕಾಗಿದೆ, ಒಂದು ಸೂಕ್ತ ಪರ್ಯಾಯ ಬೇಕಾಗಿದೆ, ಅದನ್ನು ನೀಡಲು ಎಎಪಿ ಸಿದ್ದಗೊಂಡಿದೆ ಎಂದಿದ್ದಾರೆ.

ಆಮ್​ ಆದ್ಮಿ ಪಕ್ಷದ ಮೂರನೇ ಅಭ್ಯರ್ಥಿ ಪಟ್ಟಿ ಬಿಡುಗಡೆ

ಸಭೆಯಲ್ಲಿ ಬ್ರಿಜೇಶ್ ಕಾಳಪ್ಪ ಮಾತನಾಡಿ, 28 ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ. ನಮ್ಮ ಅಭ್ಯರ್ಥಿಗಳ ಸದ್ಗುಣದ ಆಧಾರದಲ್ಲಿ, ನಮ್ಮ ಪಕ್ಷವು ಪಂಜಾಬ್ ಮತ್ತು ದೆಹಲಿಯಲ್ಲಿ ಮಾಡಿರುವ ಮತ್ತು ಮಾಡುತ್ತಿರುವ ಕೆಲಸಗಳ ಆಧಾರದ ಮೇಲೆ ನಾವು ಈ ಚುನಾವಣೆಯನ್ನು ಎದುರಿಸುತ್ತೇವೆ. ದೆಹಲಿ ಮತ್ತು ಪಂಜಾಬ್​ನಲ್ಲಿ ಸಿಗುತ್ತಿರುವ ಜನಪರ ಆಡಳಿತವನ್ನು ನೀಡಲು ಸಿದ್ದಗೊಂಡಿರುವ ನಮಗೆ ಕರ್ನಾಟಕದ ಜನರು ಆಶೀರ್ವಾದ ಮಾಡಿ ಮತ ನೀಡುತ್ತಾರೆ ಎಂದು ಅಚಲವಾಗಿ ನಂಬಿದ್ದೇವೆ ಎಂದು ತಿಳಿಸಿದರು.

ಅತ್ಯಂತ ಹಿರಿಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್​​ ಮತ್ತು ವಿಶ್ವದ ಅತಿದೊಡ್ಡ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿ‌ ಪಕ್ಷ ಎರಡೂ ಕರ್ನಾಟಕ ರಾಜಕೀಯದಲ್ಲಿ ಎಎಪಿ ಇರುವುದನ್ನು ನೋಡಿ ಭಯ ಪಟ್ಟಿವೆ, ಅವರ ಶತಮಾನಗಳ ಲೂಟಿ ರಾಜಕೀಯ ಅಂತ್ಯಗೊಳ್ಳುತ್ತದೆ ಎಂಬ ದಿಗಿಲು ಅವರಲ್ಲಿದೆ. ನಮ್ಮ ಅಭ್ಯರ್ಥಿಗಳನ್ನು ತಡೆಯಲು ಅವರು ನಾನಾ ಆಮಿಷಗಳನ್ನು ಒಡ್ಡುತ್ತಿದ್ದಾರೆ, ಬಗ್ಗದಿದ್ದಲ್ಲಿ ಹಣಬಲ ಮತ್ತು ತೋಳ್ಬಲದಿಂದ ನಮ್ಮನ್ನು ಭಯಪಡಿಸುತ್ತಿದ್ದಾರೆ. ಅವರ ಪ್ರಚಾರ ವೈಖರಿಯಲ್ಲಿ ಅಥವಾ ಅವರು ಮಾಡಿರುವ ಕೆಲಸದಲ್ಲಿ ಅವರಿಗೆ ನಂಬಿಕೆಯೇ ಇಲ್ಲದಿರುವುದರಿಂದ ನಮ್ಮ ಅಭ್ಯರ್ಥಿಗಳನ್ನು ಸುಮ್ಮನಾಗಿಸಲು ಯತ್ನಿಸುತ್ತಿದ್ದಾರೆ ಎಂದು ಬ್ರಿಜೇಶ್ ಕಾಳಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸರಾಸರಿ ವಯಸ್ಸು 47 ಒಟ್ಟು‌ 168 ಅಭ್ಯರ್ಥಿಗಳು

· 16 ರೈತರು
· 13 ಮಹಿಳೆಯರು
· 18 ವಕೀಲರು
· 10 ವೈದ್ಯರು
· 10 ಇಂಜಿನಿಯರ್​​ಗಳು

· ಡಾಕ್ಟರೇಟ್ ಹೊಂದಿರುವ 5 ಅಭ್ಯರ್ಥಿಗಳು
· ಮಾಸ್ಟರ್ ಡಿಗ್ರಿ ಹೊಂದಿರುವ 41 ಅಭ್ಯರ್ಥಿಗಳು
· ಪದವಿ ಹೊಂದಿರುವ 82 ಅಭ್ಯರ್ಥಿಗಳು

ಮೊದಲ ಹಂತದಲ್ಲಿ ಎಎಪಿ 80 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಎರಡನೇ ಹಂತದಲ್ಲಿ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 2ನೇ ಪಟ್ಟಿಯಲ್ಲಿ 11 ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು. 14 ರೈತರಿಗೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿತ್ತು. ಓರ್ವ ಬಿಎಂಟಿಸಿ ಮಾಜಿ ಕಂಡಕ್ಟರ್​ಗೂ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ:ಜೆಡಿಎಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆ: ಹೆಚ್​​​ಡಿಕೆ

ABOUT THE AUTHOR

...view details