ಬೆಂಗಳೂರು: ರಾಜಕೀಯದಲ್ಲಿ ಹೊಸ ಬದಲಾವಣೆ ತರಬೇಕು ಎಂದು ರಾಜಕೀಯಕ್ಕೆ ಪ್ರವೇಶ ಮಾಡಿರುವ ನಮಗೆ ವಿಧಾನ ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಅವರ ಆತ್ಮಹತ್ಯೆ ಸುದ್ದಿ ನಿಜಕ್ಕೂ ಆಘಾತಕಾರಿ ಎಂದು ಹೇಳುವ ಮೂಲಕ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಸಂತಾಪ ಸೂಚಿಸಿದರು.
ಎಸ್.ಎಲ್. ಧರ್ಮೇಗೌಡ ನಿಧನಕ್ಕೆ ಆಮ್ ಆದ್ಮಿ ಪಕ್ಷ ಸಂತಾಪ - ಮೋಹನ್ ದಾಸರಿ ಲೇಟೆಸ್ಟ್ ನ್ಯೂಸ್
ಕಾರಣಗಳು ಏನೇ ಇರಲಿ, ನಾವಿಂದು ಒಬ್ಬ ವ್ಯಕ್ತಿಯನ್ನು ಕಳೆದುಕೊಂಡಿರುವುದನ್ನು ಊಹಿಸಲು ಅಸಾಧ್ಯ. ಧರ್ಮೇಗೌಡರ ಕುಟುಂಬದ ಜೊತೆ ಆಮ್ ಆದ್ಮಿ ಪಕ್ಷ ನಿಲ್ಲುತ್ತದೆ..
ಮೋಹನ್ ದಾಸರಿ
ಈ ಸುದ್ದಿಯನ್ನೂ ಓದಿ:ಧರ್ಮೇಗೌಡರ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲು ತೆರಳಿರುವ ಸಿಎಂ ಬಿಎಸ್ವೈ
ರಾಜಕಾರಣದಲ್ಲೂ ಅತ್ಯಂತ ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳಿದ್ದಾರೆನ್ನುವುದಕ್ಕೆ ಇದೇ ಸೂಕ್ತ ನಿದರ್ಶನ. ಧರ್ಮೇಗೌಡ ಅವರ ಆತ್ಮಹತ್ಯೆ ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆ. ಕಾರಣಗಳು ಏನೇ ಇರಲಿ, ನಾವಿಂದು ಒಬ್ಬ ವ್ಯಕ್ತಿಯನ್ನು ಕಳೆದುಕೊಂಡಿರುವುದನ್ನು ಊಹಿಸಲು ಅಸಾಧ್ಯ. ಧರ್ಮೇಗೌಡರ ಕುಟುಂಬದ ಜೊತೆ ಆಮ್ ಆದ್ಮಿ ಪಕ್ಷ ನಿಲ್ಲುತ್ತದೆ ಎಂದು ಮೋಹನ್ ದಾಸರಿ ಹೇಳಿದರು.