ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿರುವ ಎಲ್ಲ ವಕೀಲರಿಗೆ ತಲಾ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಬೇಕು ಎಂದು ಬೆಂಗಳೂರು ವಕೀಲರ ಸಂಘ(ಎಎಬಿ), ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಆಗ್ರಹಿಸಿದೆ.
ಕೋವಿಡ್ ಸೋಂಕಿತ ವಕೀಲರಿಗೆ 1 ಲಕ್ಷ ರೂ. ನೆರವು ನೀಡುವಂತೆ ಎಎಬಿ ಆಗ್ರಹ - ಎಎಬಿ ಆಗ್ರಹ
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಕೊರೊನಾ ಸೋಂಕು ತಗುಲಿರುವ ಎಲ್ಲ ವಕೀಲರಿಗೆ ತಲಾ ಒಂದು ಲಕ್ಷ (ಮರುಪಾವತಿ ಮಾಡದ) ನೆರವು ನೀಡುವಂತೆ ಒತ್ತಾಯಿಸಿದ್ದಾರೆ.
ನೆರವು ನೀಡುವಂತೆ ಎಎಬಿ ಆಗ್ರಹ
ಕೋವಿಡ್ 2ನೇ ಅಲೆಯಲ್ಲಿ ಹೆಚ್ಚಿನ ವಕೀಲರಿಗೆ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಹಲವು ವಕೀಲರು ಚಿಕಿತ್ಸೆಗೂ ಹಣವಿಲ್ಲದಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ವಕೀಲರಿಗೆ ನೆರವಾಗಲು ದೆಹಲಿ ವಕೀಲರ ಪರಿಷತ್ತು ಕೈಗೊಂಡಿರುವ ನಿರ್ಧಾರದಂತೆ, ರಾಜ್ಯದಲ್ಲೂ ಸಹ ಕೋವಿಡ್ ಸೋಂಕಿತ ವಕೀಲರಿಗೆ ಆರ್ಥಿಕ ನೆರವು ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ರಂಗನಾಥ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೊರೊನಾ ಸಂಕಷ್ಟ... ಭಾರತದ ಇಂದಿನ ದುಃಸ್ಥಿತಿಗೆ ಮೋದಿ ಸರ್ಕಾರದ ನೀತಿಗಳೇ ಕಾರಣ: ಲ್ಯಾನ್ಸೆಟ್ ವರದಿ