ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ರಾಗಿಣಿ ಆಪ್ತ ಎ5 ವೈಭವ್ ಜೈನ್ನನ್ನು ಚಾಮಾರಾಜಪೇಟೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.
ಡ್ರಗ್ಸ್ ಜಾಲದ 5ನೇ ಆರೋಪಿ ವೈಭವ್ ಜೈನ್ಗೆ ವೈದ್ಯಕೀಯ ಪರೀಕ್ಷೆ - CCB Police
ಆರೋಗ್ಯ ತಪಾಸಣೆಗೆ ಸರ್ಕಾರಿ ಆಸ್ಪತ್ರೆಗೆ ಆರೋಪಿ ವೈಭವ್ ಜೈನ್ನನ್ನು ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಸೇರಿ ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ. ವೈಭವ್ ಈಗಾಗಲೇ ಕೊರೊನಾ ಸೋಂಕಿಗೆ ತುತ್ತಾಗಿ ನಂತರ ಸಿಸಿಬಿ ಪೊಲೀಸರು ಕ್ವಾರಂಟೈನ್ ಮಾಡಿ ವಶಕ್ಕೆ ಪಡೆದಿದ್ದರು.
ಸದ್ಯ ಆರೋಗ್ಯ ತಪಾಸಣೆಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಸೇರಿ ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ. ವೈಭವ್ ಜೈನ್ ಈಗಾಗಲೇ ಕೊರೊನಾ ಸೋಂಕಿಗೆ ತುತ್ತಾಗಿದ್ದ. ನಂತರ ಆತನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಕ್ವಾರಂಟೈನ್ ಮಾಡಿ ಬಳಿಕ ವಶಕ್ಕೆ ಪಡೆದಿದ್ದರು.
ವೈಭವ್ ಜೈನ್ ಚಿನ್ನದ ವ್ಯಾಪಾರಿಯ ಮಗನಾಗಿದ್ದು, ಈತ ತನಿಖೆ ವೇಳೆ ನಟಿ ರಾಗಿಣಿಗೆ ತಾನೇ ಮಾದಕತೆಯ ಪಿಲ್ಸ್ ತಂದು ಕೊಟ್ಟಿದ್ದಾಗಿ ಮತ್ತು ರಾಗಿಣಿ, ರವಿಶಂಕರ್, ವಿರೇನ್ ಖನ್ನಾ ಜೊತೆ ವಿದೇಶದಲ್ಲಿಯೂ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗ್ತಿದೆ. ಈಗಾಗಲೇ ಇತನ ಮೊಬೈಲ್ ಅನ್ನು ಎಫ್ಎಸ್ಎಲ್ ಕಚೇರಿಗೆ ರಿಟ್ರೈವ್ಗಾಗಿ ಕಳುಹಿಸಿದ್ದು, ಮೆಡಿಕಲ್ ಚೆಕಪ್ ಬಳಿಕ ವಿಚಾರಣೆ ಮುಂದುವರಿಯಲಿದೆ.