ಕರ್ನಾಟಕ

karnataka

ETV Bharat / state

ಟ್ವೀಟ್​ ಮೂಲಕ ಲವ್ ಜಿಹಾದ್ ಆರೋಪ ಮಾಡಿದ ಯುವತಿ.. ಅಧಿಕೃತ ದೂರು ನೀಡುವಂತೆ ಸೂಚನೆ ನೀಡಿದ ಬೆಂಗಳೂರು ಪೊಲೀಸರು​

ಟ್ವೀಟ್​ ಮೂಲಕ ಯುವತಿಯೊಬ್ಬಳು ಲವ್ ಜಿಹಾದ್​ ಆರೋಪ ಮಾಡಿದ್ದು, ಬೆಂಗಳೂರು ಪೊಲೀಸರ ನೆರವು ಕೋರಿದ್ದಾಳೆ. ಈ ನಡುವೆ ಅಧಿಕೃತ ದೂರು ನೀಡುವಂತೆ ಯುವತಿಗೆ ಪೊಲೀಸರು ಸೂಚನೆ ನೀಡಿದ್ದಾರೆ.

a-young-woman-allegations-on-a-youth-of-love-jihad
ಟ್ವೀಟ್​ ಮೂಲಕ ಲವ್ ಜಿಹಾದ್ ಆರೋಪ ಮಾಡಿದ ಯುವತಿ

By ETV Bharat Karnataka Team

Published : Sep 7, 2023, 5:42 PM IST

Updated : Sep 7, 2023, 6:00 PM IST

ಪೂರ್ವ ವಿಭಾಗ ಹೆಚ್ಚುವರಿ ಆಯುಕ್ತ ರಮಣ್​ ಗುಪ್ತಾ

ಬೆಂಗಳೂರು: ಯುವತಿಯೊಬ್ಬಳು ಲವ್ ಜಿಹಾದ್ ಆರೋಪ ಮಾಡಿದ್ದಾಳೆ. ಸಾಮಾಜಿಕ ಜಾಲತಾಣವಾದ ಎಕ್ಸ್( ಈ ಮೊದಲಿನ ಟ್ವಿಟರ್) ಮೂಲಕ ಬೆಂಗಳೂರು ಮತ್ತು ಕಾಶ್ಮೀರ ಪೊಲೀಸರು, ಪಿಎಂ‌ ಹಾಗೂ ಕರ್ನಾಟಕ ರಾಜ್ಯ ಡಿಜಿಪಿಗೆ ಟ್ಯಾಗ್ ಮಾಡಿ ಯುವತಿ ಲವ್ ಜಿಹಾದ್ ಕುರಿತಾಗಿ ಆರೋಪ ಮಾಡಿದ್ದಾಳೆ.

ನಾನು ಲವ್​ಜಿಹಾದ್​, ಅತ್ಯಾಚಾರಕ್ಕೆ ಒಳಗಾಗಿದ್ದು, ನನ್ನ ಜೀವಕ್ಕೆ ಬೆದರಿಕೆ ಇರುವ ಕಾರಣ ಬೆಂಗಳೂರಿನಲ್ಲಿ ಪೊಲೀಸರು ನನಗೆ ಈ ಕೂಡಲೆ ಸಹಾಯ ಮಾಡಬೇಕು ಎಂದು ಯುವತಿ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾಳೆ.

ಇದಕ್ಕೂ ಮುನ್ನ ಮತ್ತೊಂದು ಟ್ವೀಟ್​ ಮಾಡಿದ್ದ ಯುವತಿ, ವ್ಯಕ್ತಿಯೊಬ್ಬ ಫೇಸ್​ಬುಕ್ ಮೂಲಕ ಪರಿಚಯವಾಗಿದ್ದ, ಬಳಿಕ ತನ್ನಿಂದ ಹಣವನ್ನು ಕೂಡಾ ಪಡೆದು, ಮದುವೆಯಾಗುವುದಾಗಿ ನಂಬಿಸಿದ್ದ, ಮುಂದುವರಿದು ಆ ವ್ಯಕ್ತಿ ಹಣ ಕೇಳುತ್ತಲೇ ಇದ್ದಾನೆ ಎಂದು ಬರೆದುಕೊಂಡಿದ್ದಳು. ನನ್ನ ಬದುಕು ಅಪಾಯದಲ್ಲಿದೆ, ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಟ್ವೀಟ್​​ನಲ್ಲಿ ಮನವಿ ಮಾಡಿಕೊಂಡಿದ್ದಳು.

ಈ ಬಗ್ಗೆ ಬೆಂಗಳೂರು ಪೊಲೀಸರು ಹೇಳುವುದಿಷ್ಟು: ಈ ವಿಚಾರವಾಗಿ ಪೂರ್ವ ವಿಭಾಗ ಹೆಚ್ಚುವರಿ ಆಯುಕ್ತ ರಮಣ್​ ಗುಪ್ತಾ ಪ್ರತಿಕ್ರಿಯೆ ನೀಡಿದ್ದಾರೆ. ಠಾಣೆಗೆ ಬಂದು ಅಧಿಕೃತ ದೂರು ನೀಡುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ನಮ್ಮ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಅಧಿಕೃತವಾಗಿ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

’’ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಲವ್ ಜಿಹಾದ್ ಆರೋಪ ಮಾಡಿದ್ದಾಳೆ. ಆದರೆ, ಇಲ್ಲಿಯವರೆಗೂ ಈ ಬಗ್ಗೆ ಯಾರೊಬ್ಬರು ಬಂದು ಕಂಪ್ಲೆಂಟ್​ ಕೊಟ್ಟಿರುವುದಿಲ್ಲ. ಯುವತಿ ಠಾಣೆಗೆ ಬಂದು ದೂರು ನೀಡಿದ್ರೆ ಅದಕ್ಕೆ ತಕ್ಕುದಾದ ಕಾನೂನು ಕ್ರಮವನ್ನು ನಾವು ಕೈಗೊಳ್ಳುತ್ತೇವೆ. ನಮ್ಮ ಪೊಲೀಸರು ಈ ವಿಚಾರವಾಗಿ ಎಲ್ಲಾ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಯುವತಿಯನ್ನು ಸಂಪರ್ಕಿಸಿ ಅವರಿಗೆ ವಿನಂತಿಸಿಕೊಂಡಿದ್ದಾರೆ. ನಾವು ನಿಮಗೆ ನ್ಯಾಯ ಒದಗಿಸಿಕೊಡುತ್ತೇವೆ. ದಯವಿಟ್ಟು ಬಂದು ಕಂಪ್ಲೆಂಟ್​ ಕೊಡಿ ಎಂದು ಮನವರಿಕೆ ಮಾಡಿರುತ್ತಾರೆ. ದೂರುದಾರರು ಹೌದು ನಾನು ಏನು ಮಾಡಬೇಕೆಂದು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಬಹುಶಃ ಅವರು ಬಂದರೆ ನಾವು ಕಠಿಣವಾದ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ಪ್ರಾಥಮಿಕ ತನಿಖೆಯಲ್ಲಿ ಅವರು ಒಂದು ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಆದರೆ ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಹಾಗೂ ಯಾರೊಂದಿಗೆ ಮಾಡುತ್ತಿದ್ದರು ಎಂಬುದು ತಿಳಿದುಬಂದಿಲ್ಲ'' ಎಂದು ಹೆಚ್ಚುವರಿ ಆಯುಕ್ತ ರಮಣ್​ ಗುಪ್ತಾ ತಿಳಿಸಿದ್ದಾರೆ

ಇದನ್ನೂ ಓದಿ :'ಲವ್ ಜಿಹಾದ್​ನಲ್ಲಿ ಸಿಲುಕಿದ್ದೇನೆ, ನನ್ನನ್ನು ರಕ್ಷಿಸಿ': ಪಿಎಂ ಮೋದಿಗೆ ಮನವಿ ಮಾಡಿದ ಮಾಡೆಲ್

Last Updated : Sep 7, 2023, 6:00 PM IST

ABOUT THE AUTHOR

...view details