ಕರ್ನಾಟಕ

karnataka

ETV Bharat / state

ಪ್ರೀತಿಸಿದ ಕಾರಣಕ್ಕೆ ಯುವಕನ ಕೊಲೆ: ಬಾಲಕಿ ಚಿಕ್ಕಪ್ಪ ಸೇರಿ ಇಬ್ಬರ ಬಂಧನ - The murder of youth in Bangalore

ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ಯುವಕನನ್ನು ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

a-young-man-was-killed-for-love-in-bangalore
ಪ್ರೀತಿಸಿದ ಕಾರಣಕ್ಕೆ ಯುವಕನ ಕೊಲೆ :ಬಾಲಕಿಯ ಚಿಕ್ಕಪ್ಪ ಸೇರಿ ಇಬ್ಬರ ಬಂಧನ

By

Published : Jul 18, 2022, 5:36 PM IST

ಬೆಂಗಳೂರು: ಪ್ರೀತಿಸಿದ ವಿಚಾರಕ್ಕಾಗಿ ದ್ವೇಷ ಸಾಧಿಸಿ ಯುವಕನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಸಂಬಂಧಿ ಸೇರಿ ಇಬ್ಬರನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಾಗೇಂದ್ರ ಮತ್ತು ರಂಗಸ್ವಾಮಿ ಎಂದು ಗುರುತಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರೀತಿಸಿದ ಕಾರಣಕ್ಕೆ ಯುವಕನ ಕೊಲೆ :ಬಾಲಕಿಯ ಚಿಕ್ಕಪ್ಪ ಸೇರಿ ಇಬ್ಬರ ಬಂಧನ

ಜುಲೈ 15 ರಂದು ಹಳೆ ಮದ್ರಾಸ್ ರಸ್ತೆಯ ನಿರ್ಜನ‌ ಪ್ರದೇಶದಲ್ಲಿ ಪ್ರಜ್ವಲ್ ಎಂಬಾತನ ಕೊಲೆ‌‌ ನಡೆದಿತ್ತು. ಕೊಲೆ ಮಾಡಿದ ಆರೋಪಿಗಳು ಬಳಿಕ ತಲೆಮರೆಸಿಕೊಂಡಿದ್ದರು.‌

ಹತ್ಯೆಗೆ ಕಾರಣವಾಗಿದ್ದು ಮೆಸೇಜ್ : ಮೃತ ಪ್ರಜ್ವಲ್ ಗೆ ಆರೋಪಿ ನಾಗೇಂದ್ರ ಸಂಬಂಧಿಕನಾಗಿದ್ದಾನೆ. ಈ ನಾಗೇಂದ್ರನ ಅಣ್ಣನ ಅಪ್ರಾಪ್ತ ಮಗಳನ್ನು ಪ್ರಜ್ವಲ್ ಪ್ರೀತಿಸುತ್ತಿದ್ದ. ಜೊತೆಗೆ ಆಕೆಗೆ ಲವ್ ಯೂ ಎಂದು ಮೆಸೇಜ್ ಕಳುಹಿಸಿದ್ದ. ಇದಕ್ಕೆ ಪ್ರತಿಯಾಗಿ ಆಕೆಯೂ ಲವ್ ಯೂ ಟೂ ಎಂದು ಮೆಸೇಜ್ ಕಳುಹಿದ್ದಳು.

ಈ ಬಗ್ಗೆ ತಿಳಿದ ಬಾಲಕಿಯ ಚಿಕ್ಕಪ್ಪ ನಾಗೇಂದ್ರ ಜುಲೈ 15ರ ರಾತ್ರಿ ಪ್ರಜ್ವಲ್ ನ ಗೆಳೆಯನ ಮೂಲಕ ಪ್ರಜ್ವಲ್ ನನ್ನು ಹಳೇ ಮದ್ರಾಸ್ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿದ್ದಾನೆ. ಈ ವೇಳೆ, ಜೊತೆಗಿದ್ದ ರಂಗಸ್ವಾಮಿ ಹಾಗೂ ನಾಗೇಂದ್ರ ಸೇರಿ ಪ್ರಜ್ವಲ್ ಹಾಗೂ ಆತನನ್ನು ಕರೆದುಕೊಂಡು ಬಂದ ಇಬ್ಬರಿಗೂ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ‌.

ತೀವ್ರವಾಗಿ ಗಾಯಗೊಂಡ ಪ್ರಜ್ವಲ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ‌. ಪ್ರಕರಣದ ಆರೋಪಿ ನಾಗೇಂದ್ರನ ಮೇಲೆ ಈ ಹಿಂದೆ ಕೊಲೆಯತ್ನ‌ ಪ್ರಕರಣದಲ್ಲಿ ಆರೋಪಿಯಾಗಿದ್ದ. ಈ ಕೃತ್ಯದಲ್ಲಿ ಇನ್ನಿಬ್ಬರು ಭಾಗಿಯಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ‌.

ಓದಿ :10 ವರ್ಷಗಳ ಹಿಂದಿನ ಮರ್ಡರ್ ಮಿಸ್ಟ್ರಿ ಭೇದಿಸಿದ ಪೊಲೀಸರು: ಬಾನಲ್ಲೇ ಮಧುಚಂದ್ರಕೆ ಸಿನಿಮಾ ಸ್ಟೈಲ್​ನಲ್ಲೇ ಹತ್ಯೆ !

ABOUT THE AUTHOR

...view details