ಕರ್ನಾಟಕ

karnataka

ETV Bharat / state

ರಾಜ್ಯ ಪೊಲೀಸರನ್ನ ಬಾಯಿಗೆ ಬಂದಂತೆ ಬೈದ ಯುವಕ: ವಿಡಿಯೋ ವೈರಲ್​ ಮಾಡಿದಾತನ ಬಂಧನ - ರಾಜ್ಯ ಪೊಲೀಸ್​ ಇಲಾಖೆ ಸುದ್ದಿ,

ರಾಜ್ಯ ಪೊಲೀಸ್​ ಇಲಾಖೆಗೆ ಬಾಯಿಗೆ ಬಂದಂತೆ ಬೈದ ಯುವಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿತ್ತು. ಈ ವಿಡಿಯೋ ಪೊಲೀಸರ ಗಮನಕ್ಕೆ ಬಂದಿದ್ದು, ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ರಾಕೇಶ್​ ಬಂಧನ

By

Published : Sep 18, 2019, 1:05 PM IST

ಬೆಂಗಳೂರು: ಕರ್ನಾಟಕ ಪೊಲೀಸರಿಗೆ ಬಾಯಿಗೆ ಬಂದಂತೆ ಬೈದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನನ್ನ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ರಾಜ್ಯ ಪೊಲೀಸ್​ ಇಲಾಖೆಗೆ ಬಾಯಿಗೆ ಬಂದಂತೆ ಬೈದ ಯುವಕನ ವಿಡಿಯೋ ವೈರಲ್

ಈತ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದ ವೇಳೆ ತನ್ನ ಬಳಿ ಹಣ ಕಿತ್ತಿದ್ದಾರೆ ಎಂದು ಸೆಲ್ಫಿ ವಿಡಿಯೋ ಮಾಡಿ ಉಪ್ಪಾರಪೇಟೆ ಪೊಲೀಸರಿಗೆ ಹಾಗೂ ಪೊಲೀಸ್ ಇಲಾಖೆಗೆ ಬಾಯಿಗೆ ಬಂದಂದೆ ಅವಾಚ್ಯ ಶಬ್ಧಗಳಿಂದ ಬೈದಿದ್ದನು. ಬಳಿಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು, ಸಖತ್​ ವೈರಲ್ ಆಗಿತ್ತು.

ಆರೋಪಿ ರಾಕೇಶ್​ ಬಂಧನ

ಅವಾಚ್ಯ ಶಬ್ದಗಳಿಂದ ಪೊಲೀಸರಿಗೆ ಮತ್ತು ಪೊಲೀಸ್ ಇಲಾಖೆಗೆ ನಿಂದಿಸಿದ ಆರೋಪದ ಮೇಲೆ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಸದ್ಯ ತುಮಕೂರು ಮೂಲದ ರಾಕೇಶ್​ನನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ, ಪೊಲೀಸರು ನನ್ನನ್ನು ನಿಂದಿಸಿ, ದಂಡ ಕಟ್ಟಿಸಿಕೊಂಡಿದ್ದರು. ಈ ಹಿನ್ನೆಲೆ ಪೊಲೀಸರಿಗೆ ನಿಂದಿಸಿದ್ದೇನೆ ಎಂದು ಆರೋಪಿ ರಾಕೇಶ್ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಉಪ್ಪಾರಪೇಟೆ ಪೊಲೀಸ್ ಠಾಣೆಯ ವಶದಲ್ಲಿದ್ದು ತನಿಖೆ ಮುಂದುವರೆದಿದೆ.

ABOUT THE AUTHOR

...view details