ಆನೇಕಲ್: ಹಾಡುಹಗಲೇ ಬುದ್ದಿಮಾಂದ್ಯ ಮಹಿಳೆಯನ್ನು ದುಷ್ಕರ್ಮಿಗಳು ಕೊಲೆಗೈದಿರುವ ಘಟನೆ ವಿನಾಯಕ ನಗರದಲ್ಲಿ ನಡೆದಿದೆ. ಕತ್ತಿಗೆ ಮೊಬೈಲ್ ಚಾರ್ಜಿಂಗ್ ಕೇಬಲ್ನಿಂದ ಬಿಗಿದು ನಾಗವೇಣಿ(45) ಎಂಬವರನ್ನು ಕೊಲೆ ಮಾಡಲಾಗಿದೆ.
ನಾಗವೇಣಿಯ ತಂಗಿಯ ಮಗ ಪವನ್ ಈ ಪ್ರಕರಣ ಆರೋಪಿ. ಬುದ್ದಿಮಾಂದ್ಯಳಾಗಿದ್ದ ನಾಗವೇಣಿ ಮದುವೆಯಾಗದೆ ತಂಗಿ ಭಾಗ್ಯಳ ಆಸರೆಯಲ್ಲಿ ಬದುಕುತ್ತಿದ್ದಳು. ತನ್ನ ತಂದೆ ಹಿರಿಮಗಳಿಗೆ ಹೊಸ ಬಟ್ಟೆ, ಇನ್ನಿತರೆ ಸೌಲಭ್ಯಗಳನ್ನು ನೀಡಿ ಅವರು ಸಲಹುತ್ತಿದ್ದರು. ಇದನ್ನು ಸಹಿಸದ ಪವನ್ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.