ಬೆಂಗಳೂರು: ಚಲಿಸುತ್ತಿದ್ದ ಬಸ್ನಲ್ಲಿ ಚಲನಚಿತ್ರದಿಂದ ಪ್ರೇರಣೆಗೊಂಡ ಅಪರಿಚಿತ ಯುವಕನೋರ್ವ ಯುವತಿಗೆ ಕಿಸ್ ಕೊಟ್ಟು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿನಿಮಾ ನೋಡಿ ಪಕ್ಕದ ಸೀಟಿನಲ್ಲಿದ್ದ ಯುವತಿಗೆ ಚುಂಬಿಸಿ ಬಸ್‌ನಿಂದಿಳಿದು ಹೋದ ಯುವಕ! - ಬೆಂಗಳೂರು ಕಿಸ್ ಪ್ರಕರಣ
ಸಿನಿಮಾ ವೀಕ್ಷಿಸಿ, ಪ್ರೇರಣೆಗೊಂಡ ಯುವಕನೋರ್ವ ಚಲಿಸುತ್ತಿದ್ದ ಬಸ್ನಲ್ಲೇ ಯುವತಿಯೊಬ್ಬಳಿಗೆ ಮುತ್ತುಕೊಟ್ಟಿದ್ದಾನೆ. ಘಟನೆಯಿಂದ ನೊಂದ ಯುವತಿ ಯುವಕನ ವಿರುದ್ಧ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
![ಸಿನಿಮಾ ನೋಡಿ ಪಕ್ಕದ ಸೀಟಿನಲ್ಲಿದ್ದ ಯುವತಿಗೆ ಚುಂಬಿಸಿ ಬಸ್‌ನಿಂದಿಳಿದು ಹೋದ ಯುವಕ! A young man kissed girl in travelling bus](https://etvbharatimages.akamaized.net/etvbharat/prod-images/768-512-13082790-thumbnail-3x2-bus.jpg)
ಗೌರಿ-ಗಣೇಶ ಹಬ್ಬಕ್ಕೆಂದು ತಮ್ಮೂರು ಬಳ್ಳಾರಿಗೆ ತೆರಳಿದ್ದ ವಿದ್ಯಾರ್ಥಿನಿ ಕೆಎಸ್‌ಆರ್‌ಟಿಸಿ ಸ್ಲೀಪರ್ ಎಸಿ ಬಸ್ನಲ್ಲಿ ಬೆಂಗಳೂರಿಗೆ ಬರುತ್ತಿದ್ದಳು. ಈ ವೇಳೆ ಆಕೆಯ ಪಕ್ಕದ ಸೀಟ್ನಲ್ಲೇ ಕುಳಿತು ತೆಲುಗು ಸಿನಿಮಾ ನೋಡುತ್ತಿದ್ದ ಯುವಕ ಆಕೆಗೆ ಮುತ್ತಿಟ್ಟು ಬಸ್‌ನಿಂದ ಇಳಿದು ಹೋಗಿದ್ದಾನೆ.
ಯುವತಿಯು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅಂತಿಮ ವರ್ಷದ ಆರ್ಕಿಟೆಕ್ಟರ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ. ಟಿ.ದಾಸರಹಳ್ಳಿ-ಜಾಲಹಳ್ಳಿ ಕ್ರಾಸ್ ಮಧ್ಯೆ ಸೆ.13 ರಂದು ಮುಂಜಾನೆ 5 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ನೊಂದ ಯುವತಿ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354A, 354ರಡಿ ಪ್ರಕರಣ ದಾಖಲಿಸಿದ್ದಾರೆ.