ಬೆಂಗಳೂರು: ರಾತ್ರಿ ವೇಳೆ ಅಪಾರ್ಟ್ಮೆಂಟ್ವೊಂದಕ್ಕೆ ಪಾರಿವಾಳ ಹಿಡಿಯಲು ಹೋಗಿ ನಾಲ್ಕನೇ ಮಹಡಿಯಿಂದ ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಸಂಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
19 ವರ್ಷದ ಉಮರ್ ಫಾರೂಕ್ ಪ್ರಾಣ ಕಳೆದುಕೊಂಡ ಯುವಕ. ವಿದ್ಯಾರ್ಥಿಯಾಗಿದ್ದ ಉಮರ್ ಕೊರೊನಾ ಬಿಕ್ಕಟ್ಟಿನಿಂದ ಭೂಪಸಂದ್ರ ಮನೆಯೊಂದರಲ್ಲಿ ಉಳಿದುಕೊಂಡಿದ್ದ. ಮನೆ ಬಳಿ ಪಾರಿವಾಳ ಸಾಕುವ ವಿಪರೀತ ಹುಚ್ಚು ಬೆಳೆಸಿಕೊಂಡಿದ್ದ. ಮನೆ ಬಳಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪಾರಿವಾಳ ಬರುತ್ತಿದ್ದವು. ಇದನ್ನು ಮನಗಂಡು ಹೇಗಾದರೂ ಮಾಡಿ ಪಾರಿವಾಳ ಹಿಡಿಯುವ ಹಪಾಹಪಿಗೆ ಉಮರ್ ಮುಂದಾಗಿದ್ದ.