ಬೆಂಗಳೂರು:ಕಿಕ್ ಬಾಕ್ಸಿಂಗ್ ಆಡುತ್ತಿರುವಾಗಲೇ ಎದುರಾಳಿ ನೀಡಿದ ಪಂಚ್ಗೆ ರಿಂಗ್ನಲ್ಲೇ ಮೈಸೂರು ಮೂಲದ ಬಾಕ್ಸರ್ ಸಾವನ್ನಪ್ಪಿದ ಘಟನೆ ನಗರದಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 23 ವರ್ಷ ವಯಸ್ಸಿನ ನಿಖಿಲ್ ಎಂಬುವರು ಮೃತಪಟ್ಟಿರುವ ಯುವ ಕಿಕ್ ಬಾಕ್ಸರ್.
ಮೈಸೂರು ಮೂಲದ ನಿಖಿಲ್ ಕಳೆದ ಮೂರು ದಿನಗಳ ಹಿಂದೆ(ಭಾನುವಾರ) ನಾಗರಭಾವಿಯ ರಾಪಿಡ್ ಫಿಟ್ನೆಸ್ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾಗಿಯಾಗಿದ್ದರು. ಕಣದಲ್ಲಿರುವಾಗಲೇ ಎದುರಾಳಿ ನೀಡಿದ ಪಂಚ್ಗೆ ತಲೆಗೆ ಗಂಭೀರ ಗಾಯವಾಗಿ, ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.