ಬೆಂಗಳೂರು: ಉದ್ಯಮಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಕೆಲಸ ಮಾಡುತ್ತಲೇ ಉಂಡ ಮನೆಗೆ ಕನ್ನ ಹಾಕಿದ ಕೆಲಸಗಾರ! - ಬೆಂಗಳೂರಿನಲ್ಲಿ ಉಂಡ ಮನೆಗೆ ಕನ್ನ ಬಗೆದ ನೌಕರ,
ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕೆಲಸಗಾರನೊಬ್ಬ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
![ಕೆಲಸ ಮಾಡುತ್ತಲೇ ಉಂಡ ಮನೆಗೆ ಕನ್ನ ಹಾಕಿದ ಕೆಲಸಗಾರ! Worker theft his owner home, Worker theft his owner home in Bangalore, Bangalore theft news, ಉಂಡ ಮನೆಗೆ ಕನ್ನ ಬಗೆದ ನೌಕರ, ಬೆಂಗಳೂರಿನಲ್ಲಿ ಉಂಡ ಮನೆಗೆ ಕನ್ನ ಬಗೆದ ನೌಕರ, ಬೆಂಗಳೂರು ಕಳ್ಳತನ ಸುದ್ದಿ,](https://etvbharatimages.akamaized.net/etvbharat/prod-images/768-512-8565500-1080-8565500-1598440962018.jpg)
ಕೆಲಸ ಮಾಡುತ್ತಲೇ ಉಂಡು ಮನೆಗೆ ಕನ್ನ ಹಾಕಿದ ಕೆಲಸಗಾರ
ಚಿತ್ರದುರ್ಗ ಮೂಲದ ಶಂಕರಪ್ಪ ಬಂಧಿತ ಆರೋಪಿ. ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಶಂಕರಪ್ಪ ಮಾಲೀಕರ ವಿಶ್ವಾಸ ಸಂಪಾದಿಸಿಕೊಂಡಿದ್ದ. ಜೂಜಾಡುವ ಗೀಳು ಬೆಳೆಸಿಕೊಂಡಿದ್ದ ಆರೋಪಿ ಮಾಲೀಕರು ಮನೆಯಲ್ಲಿ ಇಲ್ಲದ ವೇಳೆ ಸುಮಾರು 15 ಲಕ್ಷ ಮೌಲ್ಯದ 320 ಗ್ರಾಂ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದ.
ಅನುಮಾನದ ಮೇರೆಗೆ ಗಿರಿನಗರ ಪೊಲೀಸರಿಗೆ ಮಾಲೀಕರು ದೂರು ನೀಡಿದ್ದರು. ಪ್ರಕರಣದ ಹಿನ್ನೆಲೆ ಆರೋಪಿ ಬಂಧಿಸಿ ವಿಚಾರಣೆ ನಡೆಸಿದಾಗ ಜೂಜಾಡಲು ಹಣ ಹೊಂದಿಸುವುದಕ್ಕಾಗಿ ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.