ಬೆಂಗಳೂರು: ಚಿಲ್ಲರೆ ಹಣ ಕೇಳಿದಕ್ಕೆ ಬಸ್ ಕಂಡಕ್ಟರ್ ಮಹಿಳಾ ಪ್ರಯಾಣಿಕಳೊಬ್ಬರ ಜತೆ ಜಗಳ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಿಎಂಟಿಸಿ ಬಸ್ ನಲ್ಲಿ ನಡೆದಿದೆ.
ಚಿಲ್ಲರೆ ಕೇಳಿದಕ್ಕೆ ಬಿಎಂಟಿಸಿ ಕಂಡಕ್ಟರ್ ಕೆಂಡಾಮಂಡಲ... ಪರಸ್ಪರ ಕಿತ್ತಾಟ, ವಿಡಿಯೋ ವೈರಲ್ - undefined
ಚಿಲ್ಲರೆ ಕೇಳಿದಕ್ಕೆ ಸಿಡಿಮಿಡಿಗೊಂಡ ಬಿಎಂಟಿಸಿ ಕಂಡಕ್ಟರ್, ಮಹಿಳಾ ಪ್ರಯಾಣಿಕಳೊಬ್ಬರ ಜತೆ ಕಿರಿಕ್ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗೊರಗುಂಟೆಪಾಳ್ಯದಿಂದ ಬನಶಂಕರಿ ಮಾರ್ಗದಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ನಲ್ಲಿ ಈ ಘಟನೆ ನಡೆದಿದ್ದು ನಾಗರಬಾವಿ ಬಸ್ ನಿಲ್ದಾಣ ಬಳಿ ಇಳಿಯಬೇಕಾದರೆ ಚಿಲ್ಲರೆ ಕೊಡುವಂತೆ ಮಹಿಳೆ ಕಂಡಕ್ಟರ್ಗೆ ಕೇಳಿದ್ದಾರೆ. ಟಿಕೆಟ್ ಮೇಲೆ ಚಿಲ್ಲರೆ ಬಾಕಿ ಬರೆದುಕೊಟ್ಟಿದ್ದ ಕಂಡಕ್ಟರ್ ಚಿಲ್ಲರೆ ಕೊಡದೇ ಮಹಿಳೆ ಜತೆ ವಾಗ್ವಾದಕ್ಕಿಳಿದಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಮಹಿಳೆಯ ಕುತ್ತಿಗೆ ಹಿಡಿದು ಹಲ್ಲೆ ನಡೆಸಿದ್ದಾನೆಂದು ಮಹಿಳೆ ಕಂಡಕ್ಟರ್ ಮೇಲೆ ಆರೋಪಿಸಿದ್ದಾರೆ.
ಮೊಬೈಲ್ ವಿಡಿಯೋದಲ್ಲಿ ಇಬ್ಬರು ಬೈದಾಡಿಕೊಂಡಿರುವುದು ಸೆರೆಯಾಗಿದ್ದು,ಬಸ್ನಲ್ಲಿ ಸಹ ಪ್ರಯಾಣಿಕರು ಹಾಗೂ ಡ್ರೈವರ್ ಇಬ್ಬರ ಜಗಳ ಬಿಡಿಸಿ ಸಮಾಧಾನಪಡಿಸಿದ್ದಾರೆ.