ಬೆಂಗಳೂರು :ಲಾಕ್ಡೌನ್ನಿಂದ ಆಸ್ಪತ್ರೆಗೆ ತೆರಳಲು ಆಗದೇ ಮಹಿಳೆಯೊಬ್ಬರು ರಸ್ತೆ ಬದಿ ನಿಂತು ಕಣ್ಣೀರು ಹಾಕಿರುವ ಘಟನೆ ನಗರದ ಯಶವಂತಪುರದ ಮತ್ತಿಕೆರೆ ಮುಖ್ಯರಸ್ತೆಯಲ್ಲಿ ನಡೆದಿದೆ.
ಬೆಂಗಳೂರು ಲಾಕ್ಡೌನ್ : ಆಸ್ಪತ್ರೆಗೆ ಹೋಗಲು ವಾಹನವಿಲ್ಲದೆ ರಸ್ತೆಯಲ್ಲಿ ಮಹಿಳೆ ಕಣ್ಣೀರು - ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ
ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಸರ್ಕಾರ ಮತ್ತೆ ಲಾಕ್ಡೌನ್ ಘೋಷಣೆ ಮಾಡಿದೆ. ಮತ್ತೊಂದೆಡೆ ಕೊರೊನಾ ಹೊರತಾದ ರೋಗದಿಂದ ಬಳಲುತ್ತಿರುವವರು ಲಾಕ್ಡೌನ್ನಿಂದ ಪರಿತಪಿಸುತ್ತಿದ್ದಾರೆ..
ಆಸ್ಪತ್ರೆಗೆ ಹೋಗಲು ವಾಹನವಿಲ್ಲದೆ ರಸ್ತೆಯಲ್ಲಿ ಮಹಿಳೆ ಕಣ್ಣೀರು
ಟಿಬಿ ಖಾಯಿಲೆಯಿಂದ ಬಳಲುತ್ತಿರುವ ಮಹಿಳೆ ಆಸ್ಪತ್ರೆಗೆ ತೆರಳಲು ಗಂಟೆಗಟ್ಟಲೇ ಆಟೋಗಾಗಿ ಕಾದು, ಆಟೋ ಸಿಗದೆ ಕಣ್ಣೀರು ಹಾಕುತ್ತಿದ್ದರು. ಲಾಕ್ಡೌನ್ ಎಫೆಕ್ಟ್ನಿಂದ ಆಟೋ ಚಾಲಕರು ಬರುವುದಿಲ್ಲ, ಒಂದು ವೇಳೆ ಆಸ್ಪತ್ರೆಗೆ ಡ್ರಾಪ್ ಮಾಡಿ ವಾಪಸ್ ಬರುವಾಗ ಆಟೋ ಸೀಜ್ ಮಾಡುತ್ತಾರೆ ಎಂದು ಆಟೋ ಚಾಲಕರು ಹಿಂದೇಟು ಹಾಕುತ್ತಿದ್ದಾರೆ.
ಈ ಹಿನ್ನೆಲೆ ಆಟೋ ಸಿಗದೆ ಕಂಗಾಲಾಗಿ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಮಾಧ್ಯಮ ಮಿತ್ರರು ನೆರವಾಗಿ ಆಟೋ ಚಾಲಕರ ಮನವೊಲಿಸಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.