ಬೆಂಗಳೂರು: ಲಾರಿ ಡ್ರೈವರ್ ನಿಯಂತ್ರಣ ತಪ್ಪಿ ಫ್ಲೈ ಓವರ್ನಿಂದ ಟ್ರಕ್ ಲಾರಿ ಕೆಳಗೆ ಬಿದ್ದು ಕ್ಲೀನರ್ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಯಶವಂತಪುರ ಫ್ಲೈಓವರ್ ಬಳಿ ನಡೆದಿದೆ.
ಫ್ಲೈ ಓವರ್ನಿಂದ ಕೆಳಗೆ ಬಿದ್ದ ಟ್ರಕ್ ...ಕ್ಲೀನರ್ ಸ್ಥಳದಲ್ಲೇ ಸಾವು - undefined
ಲಾರಿ ಡ್ರೈವರ್ ನಿಯಂತ್ರಣ ತಪ್ಪಿ ಫ್ಲೈ ಓವರ್ನಿಂದ ಟ್ರಕ್ ಲಾರಿ ಕೆಳಗೆ ಬಿದ್ದು ಕ್ಲೀನರ್ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಯಶವಂತಪುರ ಫ್ಲೈಓವರ್ ಬಳಿ ನಡೆದಿದೆ.
ಫ್ಲೈ ಓವರ್ನಿಂದ ಕಳಗೆ ಬಿದ್ದ ಟ್ರಕ್
ಬೆಳಗ್ಗೆ ಪುಣೆಯಿಂದ ಬೆಂಗಳೂರಿಗೆ ಅಣಬೆ ಪೂರೈಕೆ ಮಾಡುತ್ತಿದ್ದ ಟ್ರಕ್ ಲಾರಿ ಫ್ಲೈ ಓವರ್ ಮೇಲೆ ಚಲಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಪರಿಣಾಮ ಕ್ಲಿನರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಟ್ರಕ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡಿರುವ ಚಾಲಕನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ನಿದ್ದೆ ಮಂಪರಿನಲ್ಲಿ ಇದ್ದ ಕಾರಣ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಯಶವಂತಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು,ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Apr 14, 2019, 10:52 AM IST