ಬೆಂಗಳೂರು: ಮರದ ಕೊಂಬೆವೊಂದು ಉರುಳಿ ಪೊಲೀಸರ ತಾತ್ಕಾಲಿಕ ಚೆಕ್ಪೋಸ್ಟ್ ಮೇಲೆ ಬಿದ್ದು, ಓರ್ವನಿಗೆ ಗಾಯವಾಗಿರುವ ಘಟನೆ ನಡೆದಿದೆ.
ನೈಸ್ ರಸ್ತೆಯ ಪೊಲೀಸ್ ಚೆಕ್ಪೋಸ್ಟ್ ಮೇಲೆ ಬಿತ್ತು ಬೃಹತ್ ಮರದ ಕೊಂಬೆ! - tree fall down on check post
ಬೆಂಗಳೂರಿನ ನೈಸ್ ರಸ್ತೆಯ ಚೆಕ್ಪೋಸ್ಟ್ ಮೇಲೆ ಬೃಹತ ಮರದ ಕೊಂಬೆ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಹೋಂ ಗಾರ್ಡ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

tree
ಪಶ್ಚಿಮ ವಿಭಾಗ ಪೊಲೀಸ್ ವಿಭಾಗದ ವ್ಯಾಪ್ತಿಯ ನೈಸ್ ರಸ್ತೆಯ ಬಳಿ ಈ ಘಟನೆ ನಡೆದಿದೆ. ರಭಸದ ಗಾಳಿಯಿಂದ ಮಾವಿನ ಮರದ ಕೊಂಬೆ ಮುರಿದಿದೆ ಎಂದು ಪಶ್ಚಿಮ ವಿಭಾಗದ ಡಿ.ಸಿ.ಪಿ ತಿಳಿಸಿದ್ದಾರೆ.
ಕೂದಲೆಳೆ ಅಂತರದಲ್ಲಿ ಹೋಂ ಸಿಬ್ಬಂದಿ ಪಾರಾಗಿದ್ದು, ಘಟನೆಯಲ್ಲಿ ಮಹೇಶ್ ಎನ್ನುವ ಹೋಂ ಗಾರ್ಡ್ಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.