ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಮಳೆಗೆ ಕೆರೆಯಂತಾದ ರಸ್ತೆ... ಈ ಟ್ರಾಫಿಕ್​​ ಪೊಲೀಸ್​​​ ಮಾಡಿದ್ದೇನು ನೋಡಿ!? - kannada news

ನಿನ್ನೆ ಸುರಿದ ಭಾರಿ ಮಳೆಗೆ ಏರ್​ಪೋರ್ಟ್ ರಸ್ತೆಯ ಕೋಡಿಗೆಹಳ್ಳಿ ಬಳಿ 3 ಅಡಿಯಷ್ಟು ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ರಸ್ತೆಗಿಳಿದು ನೀರು ತೆರವು ಮಾಡಿದ ಟ್ರಾಪೀಕ್ ಪೋಲಿಸ್

By

Published : Jun 3, 2019, 10:06 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಏರ್​​ಪೋರ್ಟ್ ರಸ್ತೆಯ ಕೋಡಿಗೆಹಳ್ಳಿ ಬಳಿ 3 ಅಡಿಯಷ್ಟು ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಕಾರ್ಯನಿರತ ಹೆಬ್ಬಾಳ ಸಂಚಾರಿ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ, ಮೂರು ಬಾರಿ NHAIಗೆ ಕರೆ ಮಾಡಿ ಮಾಹಿತಿ ನೀಡಿದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ.

ರಸ್ತೆಗಿಳಿದು ನೀರು ತೆರವು ಮಾಡಿದ ಟ್ರಾಫಿಕ್​​ ಪೊಲೀಸ್​​

ಹೀಗಾಗಿ ಸ್ವತಃ ಪ್ರವೀಣ್ ಕುಮಾರ ಅವರೇ ರಸ್ತೆಗಿಳಿದು ನೀರು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಮತ್ತೊಮ್ಮೆ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಪ್ರವೀಣ್ ಕುಮಾರ್ ಮನವಿ ಮಾಡಿದರು.

ABOUT THE AUTHOR

...view details