ಕರ್ನಾಟಕ

karnataka

ETV Bharat / state

ವೈದ್ಯ ದೇವಿ ಶೆಟ್ಟಿ ಮನೆಯಲ್ಲಿ ಕಳ್ಳತನ: ಚಿನ್ನಾಭರಣ ದೋಚಿದ ಮನೆಕೆಲಸದವರು ಅಂದರ್​ - theft in narayana hrudayalaya owner house

ನಾರಾಯಣ ಹೃದಯಾಲಯದ ಮಾಲೀಕ ದೇವಿ ಶೆಟ್ಟಿ ಮನೆಯಲ್ಲಿ ಮನೆಕೆಲಸದವರೇ ಕಳ್ಳತನ ಮಾಡಿದ್ದು,ಪೊಲೀಸರು ಬಂಧಿಸಿದ್ದಾರೆ.

ನಾರಾಯಣ ಹೃದಯಾಲಯದ ಮಾಲೀಕರ ಮನೆಯಲ್ಲಿ ಕಳ್ಳತನ

By

Published : Nov 12, 2019, 7:54 PM IST

ಬೆಂಗಳೂರು: ನಾರಾಯಣ ಹೃದಯಾಲಯದ ಮಾಲೀಕ ದೇವಿ ಶೆಟ್ಟಿ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳ ಹೆಡೆ‌ಮುರಿ ಕಟ್ಟುವಲ್ಲಿ ಕೋರಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿವ್ಯಾ ಹಾಗೂ ಗಿರಿಜಾ ಬಂಧಿತ ಆರೋಪಿಗಳು .ನಾರಾಯಣ ಹೃದಯಾಲಯದ ಸಂಸ್ಥಾಪಕ ಹಾಗೂ ಮಾಲೀಕ ದೇವಿ ಶೆಟ್ಟಿ ಮನೆಯಲ್ಲಿ ಕಳೆದ ಭಾನುವಾರ ಮನೆಯಲ್ಲಿ ಬರೋಬ್ಬರಿ 21 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಜ್ರದ ಆಭರಣಗಳು ಕಳ್ಳತನವಾಗಿತ್ತು. ದೇವಿಶೆಟ್ಟಿ ಕೋರಮಂಗಲ ಠಾಣೆಯಲ್ಲಿ ದೂರು ನೀಡಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ಹಾಗೂ ಗಿರಿಜಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.ಈ ವಿಚಾರ ತಿಳಿದು ಇಬ್ಬರು ಸಿಟಿ ಬಿಟ್ಟು ಓಡಿಹೋಗಿದ್ದರು ಆದರೆ ಕೋರಮಂಗಲ ಪೊಲೀಸರ ತಂಡ ಬೆನ್ನತ್ತಿ ಆರೋಪಿಗಳ ಬಂಧಿಸಿದ್ದಾರೆ.

ನಾರಾಯಣ ಹೃದಯಾಲಯದ ಮಾಲೀಕರ ಮನೆಯಲ್ಲಿ ಕಳ್ಳತನ

ಮೂಲತಃ ಶಿವಮೊಗ್ಗದವರಾದ ಗಿರಿಜಾ ಹಾಗೂ ದಿವ್ಯ ಕಳೆದ 6 ವರ್ಷಗಳಿಂದ ಮನೆಕೆಲಸ ಮಾಡಿಕೊಂಡು ಡಾಕ್ಟರ್ ಮನೆಯಲ್ಲಿ ಉಳಿದುಕೊಂಡಿದ್ದರು.ಹೀಗೆ ಕೆಲಸ ಮಾಡಿಕೊಂಡಿರುವಾಗ‌ ಒಂದು ದಿನ ಲಾಕರ್ ಓಪನ್ ಆಗಿತ್ತಂತೆ. ಲಾಕರ್ ನಲ್ಲಿ ಏನಿದೆ ಅಂತಾ ದಿವ್ಯಾ-ಗಿರಿಜಾ ಕುತೂಹಲದಿಂದ ನೋಡಿದಾಗ.ಚಿನ್ನ,ವಜ್ರ,ಹಣ ಕಂಡು ತಮ್ಮ ನಿಯತ್ತು ಮರೆತು ಕೂಡಲೆ ಒಡವೆಯನ್ನೆಲ್ಲಾ ಬ್ಯಾಗ್​​ಗೆ ಇಳಿಸಿಕೊಂಡು ಓಡಿ ಹೋಗಿದ್ದರು. ಸದ್ಯ ಇಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ.

ABOUT THE AUTHOR

...view details