ಬೆಂಗಳೂರು:ರಸ್ತೆ ಬದಿ ಪಾರ್ಕ್ ಮಾಡಲಾಗಿದ್ದ ಕಾರಿನ ಚಕ್ರ ತೆಗೆದ ಖದೀಮ ತನ್ನ ಕಾರಿಗೆ ಜೋಡಿಸಿಕೊಂಡು ಪರಾರಿಯಾಗಿರುವ ಘಟನೆ ಯಲಹಂಕದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್: ವಾಹನದ ಟೈರ್ನೂ ಬಿಡಲ್ಲ ಈ ಖದೀಮರು! - ಕಾರ್ ಟೈರ್ ಕಳ್ಳತನ ಲೇಟೆಸ್ಟ್ ನ್ಯೂಸ್
ಬೆಂಗಳೂರಿನ ಯಲಹಂಕದಲ್ಲಿ ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರ್ನ ಚಕ್ರ ತೆಗೆದು ತನ್ನ ಕಾರಿಗೆ ಜೋಡಿಸಿಕೊಂಡು ಖದೀಮನೋರ್ವ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
![ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್: ವಾಹನದ ಟೈರ್ನೂ ಬಿಡಲ್ಲ ಈ ಖದೀಮರು! car tyre](https://etvbharatimages.akamaized.net/etvbharat/prod-images/768-512-9599366-thumbnail-3x2-surya.jpg)
ಅಕ್ಟೋಬರ್ 25 ರಂದು ಯಲಹಂಕದಲ್ಲಿ ಈ ಘಟನೆ ನಡೆದಿದ್ದು, ದೀಪಕ್ ಎಂಬುವರು ತಮ್ಮ ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿದ್ದರು. ಬೆಳಗ್ಗೆ ಬಂದು ನೋಡಿದಾಗ ಚಕ್ರದ ಬೋಲ್ಟ್ ನೆಟ್ ಫಿಟ್ ಆಗದಿರುವುದು ಕಂಡು ಬಂದಿದೆ. ಈ ಬಗ್ಗೆ ಅನುಮಾನ ಬಂದು ಪರೀಕ್ಷಿಸಿದಾಗ ಟೈಯರ್ ತೆಗೆದಿರುವುದು ಗೊತ್ತಾಗಿದೆ. ಬಳಿಕ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಖದೀಮ ಕಾರಿನ ಚಕ್ರ ತೆಗೆದು ಪರಾರಿಯಾಗಿರುವುದು ಗೊತ್ತಾಗಿದೆ. ಈ ಸಂಬಂಧ ಮಾಲೀಕ ದೀಪಕ್ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅ.24ರ ರಾತ್ರಿ 9 ಗಂಟೆಗೆ ಪಾರ್ಕ್ ಆಗಿದ್ದ ಕಾರಿನ ಬಳಿ ವ್ಯಕ್ತಿಯೊಬ್ಬ ಬಂದಿದ್ದಾನೆ. ಅಲ್ಲೇ ಸಮೀಪ ಸುತ್ತಾಡಿಕೊಂಡು ಬಳಿಕ ರಾತ್ರಿ 11 ಗಂಟೆಯ ವೇಳೆಗೆ ತನ್ನ ಕಾರಿನ ಟೈಯರ್ ತೆಗೆದು, ನಂತರ ಅಲ್ಲಿಯೇ ಪಾರ್ಕ್ ಆಗಿದ್ದ ಇನ್ನೊಂದು ಕಾರಿನ ಮುಂಭಾಗದ ಎಡಭಾಗದ ಚಕ್ರ ತೆಗೆದಿದ್ದಾನೆ. ಬಳಿಕ ತನ್ನ ಕಾರಿಗೆ ಕದ್ದ ಚಕ್ರವನ್ನು ಜೋಡಿಸಿಕೊಂಡು ಪರಾರಿಯಾಗಿದ್ದಾನೆ. ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.