ಬೆಂಗಳೂರು :ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ತಮಿಳುನಾಡಿನ ಚೆನ್ನೈಗೆ ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಹಮೀದ್ ಎಂಬಾತ ಬಂಧಿತ ಆರೋಪಿ.
401 ನಕ್ಷತ್ರ ಆಮೆ ಅಕ್ರಮ ಸಾಗಾಟ : ತಮಿಳುನಾಡು ಮೂಲದ ಆರೋಪಿ ಅರೆಸ್ಟ್ - ಬೆಂಗಳೂರಿನಲ್ಲಿ 401 ನಕ್ಷತ್ರ ಆಮೆಗಳು ವಶ
ಪೊಲೀಸರು, ಆರೋಪಿಯನ್ನು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೊಡ್ಡ ಸಂಖ್ಯೆಯ ಆಮೆಗಳನ್ನು ಆರೋಪಿಗಳಿಗೆ ಕೊಟ್ಟವರಾರು..? ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ..
401 ನಕ್ಷತ್ರ ಆಮೆ ಅಕ್ರಮ ಸಾಗಾಟ
ಕಲಾಸಿಪಾಳ್ಯ ಬಳಿ ನ್ಯಾಷನಲ್ ಟ್ರಾವೆಲ್ ಬಳಿ ಎರಡು ಬ್ಯಾಗ್‌ಗಳಲ್ಲಿ ಆರೋಪಿ 401 ನಕ್ಷತ್ರ ಆಮೆಗಳನ್ನು ಸಾಗಾಟ ಮಾಡುಲು ಯತ್ನಿಸಿದಾಗ, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯು ನಗರದಿಂದ ತಮಿಳುನಾಡಿಗೆ ಹೋಗಿ ನಕ್ಷತ್ರ ಆಮೆ ಮಾರಾಟ ಮಾಡಲು ಮುಂದಾಗಿದ್ದ.
ಪೊಲೀಸರು, ಆರೋಪಿಯನ್ನು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೊಡ್ಡ ಸಂಖ್ಯೆಯ ಆಮೆಗಳನ್ನು ಆರೋಪಿಗಳಿಗೆ ಕೊಟ್ಟವರಾರು..? ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Last Updated : Nov 16, 2021, 6:34 PM IST
TAGGED:
smuggling 401 star turtles