ಕರ್ನಾಟಕ

karnataka

ETV Bharat / state

ಖಗೋಳ ಕೌತುಕಕ್ಕೆ ಸಾಕ್ಷಿಯಾದ ಉದ್ಯಾನ ನಗರಿ... ಶೂನ್ಯ ನೆರಳು ಕಂಡು ನಿಬ್ಬೆರಗಾದ ಜನ

ಇಂದು ರಾಜ್ಯ ರಾಜಧಾನಿ ಬೆಂಗಳೂರಿನ ಜನ ಅಚ್ಚರಿಯೆಂಬತೆ ಖಗೋಳ ಕೌತುಕವನ್ನು ಕಣ್ತುಂಬಿಕೊಂಡರು. ಶೂನ್ಯ ನೆರಳನ್ನು ಕಂಡು ಜನ ಅಚ್ಚರಿಗೊಂಡರು.

ಬೆಂಗಳೂರು

By

Published : Apr 24, 2019, 7:56 PM IST


ಬೆಂಗಳೂರು: ವರ್ಷಕ್ಕೆ ಒಂದೆರಡು ಬಾರಿ ಸಂಭವಿಸುವ ಖಗೋಳದ ಕೌತುಕಗಳನ್ನು ನೋಡೋದಂದ್ರೆ ಎಲ್ಲರಿಗೂ ಕುತೂಹಲ. ಇದೇ ರೀತಿಯ ವಿಶೇಷ ದಿನಕ್ಕೆ ಬೆಂಗಳೂರು ಸಾಕ್ಷಿಯಾಯ್ತು. ಇವತ್ತು ಝೀರೋ ಶ್ಯಾಡೋ ಡೇ... ಅಂದ್ರೆ ಶೂನ್ಯ ನೆರಳಿನ ದಿನ.


ಬೆಂಗಳೂರಿನಲ್ಲಿ ಸರಿಯಾಗಿ 12-18 ರ ಸಮಯಕ್ಕೆ ನೆರಳು ಕಾಣದಿರುವ ಕ್ಷಣ ಸಂಭವಿಸಿತು. ಮಂಗಳೂರು ಹಾಗೂ ಚೆನ್ನೈನಲ್ಲೂ ಬೇರೆ ಸಮಯದಲ್ಲಿ ಈ ಕೌತುಕ ಕಂಡುಬಂತು.

ಖಗೋಳ ಕೌತುಕ
ನಗರದ ನೆಹರೂ ತಾರಾಲಯದಲ್ಲಿ ಖಗೋಳದ ಈ ವಿಸ್ಮಯ ನೋಡಲು ವ್ಯವಸ್ಥೆ ಮಾಡಲಾಗಿತ್ತು. ಶೂನ್ಯ ನೆರಳಿನ ಸಮಯದಲ್ಲಿ ನೇರವಾಗಿ ಸೂರ್ಯನ ಬೆಳಕು ಭೂಮಿಗೆ ಬಿದ್ದಾಗ ಅದನ್ನು ತೋರಿಸಲು ಪಟಾಕಿ ಸಿಡಿಯುವ ವಿದ್ಯಾಮಾನವನ್ನು ನೆಹರೂ ತಾರಾಲಯದಲ್ಲಿ ಏರ್ಪಡಿಸಲಾಗಿತ್ತು. ಅಲ್ಲದೆ ಮೂರು ರಂದ್ರಗಳುಳ್ಳ ಸ್ಟಾಂಡ್ ಇಟ್ಟು ಸೊನ್ನೆಯಾಕಾರದ ಬೆಳಕು ಬಿದ್ದಾಗ ಝೀರೋ ಶ್ಯಾಡೋ ಸಮಯ ಎಂದು ತಿಳಿಸುವ ಪ್ರದರ್ಶನ ಏರ್ಪಡಿಸಲಾಗಿತ್ತು. ಸಮಾನಾಂತರವಾಗಿ ಕೆಲ ವಸ್ತುಗಳನ್ನಿಟ್ಟು ಬೆಳಕು ನೇರವಾಗಿ ಬಿದ್ದಾಗ ಮಾತ್ರ ಶೂನ್ಯ ನೆರಳು ಎಂದು ಅಕ್ಷರಗಳನ್ನು ತೋರಿಸುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಏನಿದು ಶೂನ್ಯ ನೆರಳು ದಿನ?

ಪ್ರತೀ ವರ್ಷ ಇದು ಎರಡು ಬಾರಿ ಸಂಭವಿಸುತ್ತದೆ. ಏಪ್ರಿಲ್ 24 ಹಾಗೂ ಆಗಸ್ಟ್ 18ಕ್ಕೆ ನಡೆಯುತ್ತದೆ. ಶೂನ್ಯ ನೆರಳು ಸಂಭವಿಸುವಾಗ ಭೂಮಿಯ ವೇಗ ತಿಳಿಯುವ ಪ್ರಯತ್ನ ಮಾಡಲಾಗುತ್ತಿದ್ದು, ಒಂದು ಕ್ಷಣ ಸಂಭವಿಸುತ್ತದೆ. ಭೂಮಿಯ ವಿವಿಧ ಭಾಗ ಸೂರ್ಯನಿಗೆ ಎದುರಾಗುವಾಗ ಶೂನ್ಯ ನೆರಳಾಗುತ್ತದೆ ಎಂದು ಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಜಿ.ಗಲಗಲಿ ತಿಳಿಸಿದರು.


ಅಲ್ಲದೆ ಹಿಂದಿನ ಕಾಲದ ವಿಜ್ಞಾನಿಯೊಬ್ಬರು ಭೂಮಿಯ ನಡುವಿನ ಅಂತರವನ್ನು ತಿಳಿಯಲು, ಕಂಬದ ನೆರಳಿನ ಅಂತರ ಲೆಕ್ಕಾಚಾರ ಮಾಡಿ ಭೂಮಿಯ ಸುತ್ತಳತೆ ಕಂಡುಹಿಡಿದಿದ್ದರು. ಇದನ್ನೇ ಈಗ ಭಾರತದ ಹಲವಾರು ತಾರಾಲಯಗಳು ಸೇರಿ ಈ ಪ್ರಯೋಗ ಮಾಡುತ್ತಿದ್ದೇವೆ ಎಂದರು.

ABOUT THE AUTHOR

...view details