ಕರ್ನಾಟಕ

karnataka

ETV Bharat / state

ವಿಧಾನಸಭಾ ಚುನಾವಣೆ 2023: ಹೆಚ್ಚುವರಿ ಬೋಗಿಗಳೊಂದಿಗೆ ರಾಜ್ಯದಲ್ಲಿ ಸಂಚರಿಸಲಿವೆ ವಿಶೇಷ ರೈಲುಗಳು - karnataka election 2023

ಚುನಾವಣೆ ಮತದಾನ ಹಿನ್ನೆಲೆ ವಿಶೇಷ ರೈಲು ಮತ್ತು ಹೆಚ್ಚುವರಿ ಬೋಗಿಗಳ ವ್ಯವಸ್ಥೆಯನ್ನು ಮಾಡಲಾಗಿದೆ.

a-special-train-and-additional-coaches-and-bougies-for-election
ವಿಧಾನಸಭಾ ಚುನಾವಣೆ 2023: ರಾಜ್ಯದಲ್ಲಿ ಸಂಚರಿಸಲಿವೆ ವಿಶೇಷ ರೈಲುಗಳು, ಹೆಚ್ಚುವರಿ ಬೋಗಿಗಳು

By

Published : May 9, 2023, 8:15 PM IST

Updated : May 9, 2023, 10:00 PM IST

ಬೆಂಗಳೂರು:ರಾಜ್ಯದಲ್ಲಿ ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ದಿನವಾದ ಬುಧವಾರ ವಿಶೇಷ ರೈಲು ಹಾಗೂ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ. ಬೆಂಗಳೂರು-ಬೆಳಗಾವಿ, ಬೆಂಗಳೂರು-ಬೀದರ್, ಬೆಂಗಳೂರು (ಯಶವಂತಪುರ)- ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚರಿಸಲಿವೆ.

ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ಒಂದು ರೈಲು ಸಂಚರಿಸಲಿದೆ. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮೇ 9ರಂದು ಇಂದು ರಾತ್ರಿ 8.30ಕ್ಕೆ ಹೊರಡಲಿದ್ದು, ಮೇ 10ರಂದು ಬೆಳಗ್ಗೆ 8.20ಕ್ಕೆ ಬೆಳಗಾವಿ ತಲುಪಲಿದೆ. ಮೇ 10ರ ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಡಲಿದ್ದು, ಮೇ 11ರ ಮುಂಜಾನೆ 5 ಗಂಟೆಗೆ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ತಲುಪಲಿದೆ. ಯಶವಂತಪುರದಿಂದ ಮುರುಡೇಶ್ವರಕ್ಕೂ ವಿಶೇಷ ರೈಲು ಮೇ 9ರಂದು ರಾತ್ರಿ 11.55ಕ್ಕೆ ಹೊರಡಲಿದ್ದು, ಮೇ 10ರಂದು ಮಧ್ಯಾಹ್ನ 12.55ಕ್ಕೆ ತಲುಪಲಿದೆ. ಅದೇ ದಿನ ಮಧ್ಯಾಹ್ನ 1.30ಕ್ಕೆ ಮುರುಡೇಶ್ವರದಿಂದ ಹೊರಡಲಿದ್ದು, ಮರುದಿನ 4 ಗಂಟೆಗೆ ಯಶವಂತಪುರಕ್ಕೆ ಬರಲಿದೆ.

ಇನ್ನು ಬೀದರ್​​ಗೆ ತಲುಪುವ ರೈಲು ಮೇ 9ರಂದು ಸಂಜೆ 5 ಗಂಟೆಗೆ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಮೆಜೆಸ್ಟಿಕ್)ನಿಂದ ಹೊರಟಿದ್ದು, ನಾಳೆ ಬೆಳಗ್ಗೆ 7.20ಕ್ಕೆ ಬೀದರ್ ತಲುಪಲಿದೆ. ಮೇ 10ರಂದು ರಾತ್ರಿ 8 ಗಂಟೆಗೆ ಬೀದರ್​​​ನಿಂದ ಹೊರಟು ಮರುದಿನ ಬೆಳಗ್ಗೆ 11 ಗಂಟೆಗೆ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬರಲಿದೆ. ಈಗಾಗಲೇ ಸಂಚರಿಸುತ್ತಿರುವ ರೈಲುಗಳಿಗೆ ಕೂಡ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗಿದೆ.

17307/17308 ಬಾಗಲಕೋಟೆ, ಮೈಸೂರು, ಬಸವ ಎಕ್ಸ್​​ಪ್ರೆಸ್​​ಗೆ ಹಾಗೂ 16593/94 ಬೆಂಗಳೂರು ನಾಂದೇಡ್ ವಯಾ ರಾಯಚೂರು, ಯಾದಗಿರಿ ರೈಲುಗಳಿಗೆ ತಲಾ ಒಂದು ಕೋಚ್ ಸೇರ್ಪಡೆ ಮಾಡಲಾಗುತ್ತದೆ. ಬೆಂಗಳೂರು-ಕಾರವಾರ ಮಧ್ಯೆ ಸಂಚರಿಸುವ 16595/96 ಸಂಖ್ಯೆಯ ರೈಲಿಗೂ ಹೆಚ್ಚುವರಿ ಕೋಚ್ ಇರಲಿದೆ. 12079/80 ಬೆಂಗಳೂರು-ಹುಬ್ಬಳ್ಳಿ ಜನಶತಾಬ್ಧಿ ಎಕ್ಸ್​​ಪ್ರೆಸ್​ಗೆ ಎರಡು ಹೆಚ್ಚುವರಿ ಕೋಚ್​​ಗಳು ಇರಲಿವೆ.

ಇದನ್ನೂ ಓದಿ:ಯಲಹಂಕ ನಿಲ್ದಾಣದಲ್ಲಿ ಗುದ್ದಿದ ಬಿಎಂಟಿಸಿ ಬಸ್​ : ಕಂಡಕ್ಟರ್​ ಸ್ಥಳದಲ್ಲೇ ಸಾವು

Last Updated : May 9, 2023, 10:00 PM IST

ABOUT THE AUTHOR

...view details