ಬೆಂಗಳೂರು:ಶ್ರೀಲಂಕಾದಲ್ಲಿ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟದ ಬಳಿಕ ಬೆಂಗಳೂರು ನಗರ ಪೋಲಿಸರು ಎಚ್ಚೆತ್ತ ಬೆನ್ನಲ್ಲೇ ಗ್ರಾಮಾಂತರ ಜಿಲ್ಲಾ ಪೊಲೀಸರು ಸಹ ಎಚ್ಚೆತ್ತುಕೊಂಡಿದ್ದಾರೆ.
ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಹಿನ್ನೆಲೆ: ಎಚ್ಚೆತ್ತುಕೊಂಡ ಗ್ರಾಮಾಂತರ ಪೊಲೀಸರು - undefined
ಶ್ರೀಲಂಕಾದಲ್ಲಿ ಉಗ್ರರು ನಡೆಸಿದ ಸ್ಫೋಟದ ಹಿನ್ನೆಲೆ ಬೆಂಗಳೂರು ನಗರ ಪೋಲಿಸರು ಎಚ್ಚೆತ್ತ ಬೆನ್ನಲ್ಲೇ ಗ್ರಾಮಾಂತರ ಜಿಲ್ಲಾ ಪೊಲೀಸರು ಸಹ ಎಚ್ಚೆತ್ತುಕೊಂಡಿದ್ದಾರೆ.
![ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಹಿನ್ನೆಲೆ: ಎಚ್ಚೆತ್ತುಕೊಂಡ ಗ್ರಾಮಾಂತರ ಪೊಲೀಸರು](https://etvbharatimages.akamaized.net/etvbharat/prod-images/768-512-3116681-thumbnail-3x2-bng.jpg)
ಇವತ್ತು ಬೆಂಗಳೂರು ಗ್ರಾಮಾಂತರ ಎಸ್.ಪಿ ಕಚೇರಿಯ ಆವರಣದಲ್ಲಿ ಸ್ಟಾರ್ ಹೋಟೆಲ್ ಮಾಲೀಕರು, ದೇವಾಲಯದ ಟ್ರಸ್ಟಿಗಳು, ಮಸೀದಿ ಮೌಲ್ವಿಗಳು, ಚರ್ಚ್ ಪಾಧರ್ಸ್ ಹಾಗೂ ಬಿಷಪ್ಗಳೊಂದಿಗೆ ಸಭೆ ಸೇರಿದ್ದ ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್ ಚಂದ್ರ ಹಾಗೂ ಎಸ್.ಪಿ. ರಾಮ್ ನಿವಾಸ್ ಸೆಪಟ್, ಸಾರ್ವಜನಿಕ ಸ್ಥಳಗಳಾದ ಮಾಲ್, ಹೋಟೆಲ್, ದೇವಾಲಯ, ಚರ್ಚ್, ಮಸೀದಿಗಳಿಗೆ ಬರುವ ಪ್ರತಿಯೊಬ್ಬರ ಮೇಲೂ ಹದ್ದಿನ ಕಣ್ಣಿಡಲು ಸೂಚಿಸಿದ್ದಾರೆ.
ಈ ವೇಳೆ ಐಜಿಪಿ ಶರತ್ಚಂದ್ರ ಹೈಟೆಕ್ ಸಿಸಿಟಿವಿ ಅಳವಡಿಕೆಗೆ ಸೂಚಿಸಿದಾಗ ಸಂಸ್ಥೆಗಳ ಕೆಲ ಮುಖಂಡರು ಹಣದ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ರು. ಆಗ ಕೊಂಚ ಗರಂ ಆದ ಐಜಿಪಿ ಇದು ಜನರ ಜೀವದ ಪ್ರಶ್ನೆ. ನಿಮ್ಮ ಬಳಿ ಬರುವ ಜನರ ಭದ್ರತೆ ದೃಷ್ಟಿಯಿಂದ ಹಣದ ಬಗ್ಗೆ ಯೋಚಿಸದೆ ಸಹಕರಿಸಬೇಕಾಗುತ್ತದೆ ಎಂದರು.