ಬೆಂಗಳೂರು:ರಾಬರಿ , ದರೋಡೆ , ಸುಲಿಗೆ ಅಂತ ಒಡಾಡುತ್ತಿದ್ದ ಪುಡಿ ರೌಡಿಯನ್ನು ದುಷ್ಕರ್ಮಿಗಳು ಬೆಂಗಳೂರಿನಲ್ಲಿ ಹಾಡಹಾಗಲೇ ಕೊಲೆ ಮಾಡಿದ್ದಾರೆ.
ಹಾಡಹಗಲೇ ಬೀದಿ ಹೆಣವಾದ ರೌಡಿಶೀಟರ್....ದೋಸ್ತಿಗಳಿಂದಲೇ ಪಾತಕನ ಕೊಲೆ - bengaluru latest crime news
ರಾಬರಿ ,ದರೋಡೆ , ಸುಲಿಗೆ ಮಾಡ್ಕೊಂಡು ಲವ್ವಿ - ಡವ್ವಿ ಅಂತ ಒಡಾಡುತ್ತಿದ್ದ, ಪುಡಿ ರೌಡಿ ಹಾಡಹಗಲೇ ದುಷ್ಕರ್ಮಿಗಳಿಂದ ಕೊಲೆ ಆಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಸುದರ್ಶನ್ (20) ಕೊಲೆಯಾದ ಪುಡಿ ರೌಡಿ. ರಾಬರಿ, ದರೋಡೆ ಒಟ್ಟಿಗೆ ಮಾಡ್ತಿದ್ದ ಗ್ಯಾಂಗ್ ನ ಸದಸ್ಯರು ಕರೆ ಮಾಡಿ ಸುದರ್ಶನನ್ನ ಕರೆಸಿದ್ದಾರೆ. ಯಾಕಂದ್ರೆ ಪುಡಿ ರೌಡಿ ಸುದರ್ಶನ್ ಗ್ಯಾಂಗ್ನ ಸದಸ್ಯನ ತಂಗಿಯನ್ನ ಸುದರ್ಶನ್ ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಸುದರ್ಶನ್ ಹಾಗೂ ಕೊಲೆ ಮಾಡಿರುವ ಗ್ಯಾಂಗ್ ನ ಹುಡಗರು ಆಗಾಗ ಗಲಾಟೆ ಮಾಡಿಕೊಳ್ತಾ ಇದ್ರು ಎನ್ನಲಾಗಿದೆ.
ಕರೆ ಮಾಡಿದ ಹುಡುಗರು ಜೈಲಿನಿಂದ ಬಂದಿದ್ಯ ಮಾತನಾಡೊಕ್ಕೆ ಪೂರ್ಣ ಚಂದ್ರ ತೇಜಸ್ವಿ ಬಡವಾಣೆಗೆ ಬಾ ಎಂದಿದ್ದಾರೆ. ನಂತ್ರ ಖಾಲಿ ಸೈಟ್ ನಲ್ಲಿ ಗಲಾಟೆ ಮಾಡಿ ಸುದರ್ಶನ್ ಕತ್ತು ಮತ್ತು ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಆರೋಪಿಗಳು ನಂತರ ಪರಾರಿಯಾಗಿದ್ದಾರೆ. ಘಟನೆ ಸಂಬಂದ ಚೆನ್ನಮ್ಮಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು , ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ .ಕೊಲೆಯಾದ ಸುದರ್ಶನ್ ಬ್ಯಾಟರಾಯನಪುರ, ಗಿರಿನಗರ , ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಸುಲಿಗೆ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.