ಬೆಂಗಳೂರು :ರಾಜ್ಯದಲ್ಲಿ ಕೃಷಿ ಹೊಂಡಗಳ ನಿರ್ಮಾಣ ಯೋಜನೆಯನ್ನು ಮುಂದುವರೆಸುವುದರ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು. ಇಂದು ಕೃಷಿ ಇಲಾಖೆ ಅನುದಾನ ಬೇಡಿಕೆ ಮೇಲೆ ನಡೆದ ಚರ್ಚೆಯಲ್ಲಿ ಸಚಿವರು ಉತ್ತರಿಸುವ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು. ಅಲ್ಲದೇ ಕೃಷಿ ಹೊಂಡಗಳಿಂದ ರೈತರಿಗೆ ಅನುಕೂಲವಾಗಿರುವ ಬಗ್ಗೆ ಕೃಷಿ ವಿವಿ ನೀಡಿರುವ ವರದಿಯನ್ನು ತರಿಸಿ ನೋಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.
ಕೃಷಿಹೊಂಡ ನಿರ್ಮಾಣ ಮಾಡುವ ಯೋಜನೆ 2019ಕ್ಕೆ ಮುಕ್ತಾಯ :ಒಂದು ಜಿಲ್ಲೆ, ಒಂದು ತಾಲೂಕಿನಲ್ಲಿ ಹೆಚ್ಚು, ಮತ್ತೊಂದು ತಾಲೂಕಿನಲ್ಲಿ ಕಡಿಮೆ ಕೃಷಿ ಹೊಂಡಗಳು ನಿರ್ಮಾಣವಾಗಿವೆ. ಸರಿಸಮವಾಗಿ ನಿರ್ಮಾಣವಾಗಿಲ್ಲ. ಕೃಷಿ ಹೊಂಡ ನಿರ್ಮಾಣ ಮಾಡುವ ಯೋಜನೆ 2019ಕ್ಕೆ ಮುಕ್ತಾಯವಾಗಿದೆ. ಅವಶ್ಯಕತೆ ಇರುವ ಕಡೆ ಕೃಷಿಹೊಂಡ ನಿರ್ಮಾಣ ಮಾಡಬಾರದು ಎಂದಿಲ್ಲ. ಅಗತ್ಯವಿರುವ ಕಡೆ ನರೇಗಾ ಯೋಜನೆಯಡಿ ನಿರ್ಮಿಸಬಹುದಾಗಿದೆ ಎಂದರು.
ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಅವಕಾಶ :ಇದಕ್ಕೂ ಮುನ್ನ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, 2014 ರಿಂದ 19ರವರೆಗೆ ಕೃಷಿ ಹೊಂಡವನ್ನು ಮಿಷನ್ ಮೋಡ್‍ನಲ್ಲಿ ನಿರ್ಮಿಸಲಾಗಿತ್ತು. ಈಗ ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆಗ ಸಿದ್ದರಾಮಯ್ಯ ಅವರು ಕೃಷಿ ಹೊಂಡದ ಅನುದಾನವನ್ನು ಏಕೆ ನಿಲ್ಲಿಸಿದ್ದೀರಿ?. 2.60 ಲಕ್ಷ ಕೃಷಿ ಹೊಂಡ ನಿರ್ಮಿಸಲಾಗಿದೆ.
ಕೃಷಿ ವಿಜ್ಞಾನಿಗಳು ಕೃಷಿ ಹೊಂಡದಿಂದ ಉದ್ಯೋಗ ಹೆಚ್ಚಳ ಹಾಗೂ ಇಳುವರಿ ಹೆಚ್ಚಾಗಲಿದೆ ಎಂಬ ವರದಿ ನೀಡಿದ್ದಾರೆ ಎಂದು ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕೃಷಿ ಹೊಂಡದಿಂದ ಅನುಕೂಲವಿದೆ. ಒಳ್ಳೆಯದಾಗುತ್ತದೆ ಎಂಬ ಅಭಿಪ್ರಾಯ ಶಾಸಕರಾದ್ದಾಗಿದೆ ಎಂದರು.