ಕರ್ನಾಟಕ

karnataka

ETV Bharat / state

ಚಿಕ್ಕ ಕಾರಣಕ್ಕೆ ದೊಡ್ಡ ಶಿಕ್ಷೆ... ಮಹಿಳೆಯ ಖಾಸಗಿ ಫೋಟೋ ಹರಿಯಬಿಟ್ಟ ಸರ್ಕಾರಿ ನೌಕರ! - woman's private photo is viral

ಮಹಿಳೆಯೊಬ್ಬಳು ಲಾಕ್​​​ಡೌನ್ ಸಂದರ್ಭದಲ್ಲಿ ಭೇಟಿಯಾಗದ ಕಾರಣಕ್ಕೆ ಆಕ್ರೋಶಗೊಂಡ ಸರ್ಕಾರಿ ನೌಕರವೊಬ್ಬ ಆಕೆಯ ಖಾಸಗಿ ಫೋಟೋವನ್ನು ಹರಿಯಬಿಟ್ಟಿರುವ ಘಟನೆ ನಡೆದಿದೆ.

A private photo of a woman leaked by a Man because she refuse to meet in Lockdown
ಲಾಕ್​​ಡೌನ್​ನಲ್ಲಿ ಭೇಟಿಯಾಗಲಿಲ್ಲ ಎಂದು ಮಹಿಳೆಯ ಖಾಸಗಿ ಫೋಟೊ ಹರಿಬಿಟ್ಟ ಕೀಚಕ

By

Published : Jun 16, 2020, 2:49 AM IST

ಬೆಂಗಳೂರು:ಅವಿವಾಹಿತ ಸರ್ಕಾರಿ ನೌಕರನೊಬ್ಬ ಮಹಿಳೆಯೊಬ್ಬಳೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಕೊರೊನಾ ಲಾಕ್​​ಡೌನ್ ಸಮಯದಲ್ಲಿ ಭೇಟಿಯಾಗದ ಕಾರಣಕ್ಕೆ ಆಕ್ರೋಶಗೊಂಡು ಮಹಿಳೆಯ ಖಾಸಗಿ ಫೋಟೋಗಳನ್ನು ಹರಿಯಬಿಟ್ಟು ನೀಚ ಕೃತ್ಯ ನಡೆಸಿದ ಘಟನೆ ನಗರದ ಕೆಆರ್ ಪುರಂನಲ್ಲಿ ನಡೆದಿದೆ.

ಇನ್ನು ಮಹಿಳೆಯ ಖಾಸಗಿ ಫೋಟೋಗಳನ್ನು ಆಕೆಯ ಪತಿಯ ಅಣ್ಣನಿಗೆ ಕಳುಹಿಸಿದ್ದಾನೆ. ಕೆಆರ್ ಪುರಂನ 36 ವರ್ಷದ ಮಹಿಳೆಯ ಪತಿ ವಿಕಲಚೇತನರಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು ಎರಡು ಬಾಡಿಗೆ ಮನೆಗಳಿಂದ ಬರುವ ಆದಾಯದಲ್ಲಿ ಇವರ ಕುಟುಂಬದ ಜೀವನ ಸಾಗುತ್ತಿದೆ.

8 ತಿಂಗಳ ಹಿಂದೆ ಫೇಸ್​ಬುಕ್​ನಲ್ಲಿ 27 ವರ್ಷದ ಅವಿವಾಹಿತ ಸರ್ಕಾರಿ ನೌಕರನ ಪರಿಚಯವಾಗಿದೆ. ಪರಿಚಯ ಸಲುಗೆ ಬೆಳೆದು ವಿವಾಹೇತರ ಸಂಬಂಧಕ್ಕೆ ತಿರುಗಿದೆ. ಇನ್ನು ಆ ಯುವಕ ಮಹಿಳೆಯಿಂದ ಆಗಾಗ ಹಣ ಪಡೆಯುತ್ತಿದ್ದ ಎನ್ನಲಾಗಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಭೇಟಿಯಾಗುವಂತೆ ಪೀಡಿಸುತ್ತಿದ್ದ. ಹಣ ಕೊಡದಿದ್ದರೆ, ಭೇಟಿಯಾಗದಿದ್ದರೆ ಖಾಸಗಿ ಫೋಟೋಗಳನ್ನು ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಇದಕ್ಕೆ ಮಹಿಳೆ ತಲೆಕೆಡಿಸಿಕೊಳ್ಳಲಿಲ್ಲ.

ಆಕ್ರೋಶಗೊಂಡ ನೌಕರ ಮಹಿಳೆಯ ಖಾಸಗಿ ಫೋಟೋಗಳನ್ನು ಆಕೆಯ ಪತಿಯ ಅಣ್ಣನಿಗೆ ಕಳುಹಿಸಿದ್ದಾನೆ. ಮಹಿಳೆ ಕುಟುಂಬದವರು ‘ಪರಿಹಾರ ಕೌಟುಂಬಿಕ ಸಲಹಾ ಕೇಂದ್ರ’ದ ಮೊರೆ ಹೋಗಿದ್ದು, ಅಲ್ಲಿ ವಿಚಾರಣೆಯ ವೇಳೆ ನೌಕರ ತಪ್ಪೊಪ್ಪಿಕೊಂಡಿದ್ದಾನೆ . ಆರೋಪಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details