ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ.ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಕಳೆದ ಎರಡ್ಮೂರು ದಿನಗಳಿಂದ ಪರ- ವಿರೋಧದ ಹೇಳಿಕೆಗಳು ಕೇಳಿ ಬರುತ್ತಿವೆ. ಇದೀಗ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಹರಿದಾಡುತ್ತಿದ್ದು, ಇನ್ನೊಂದು ಸುತ್ತಿನ ಕೇಸರೆರಚಾಟಕ್ಕೆ ನಾಂದಿ ಹಾಡುವ ಸೂಚನೆ ಗೋಚರಿಸುತ್ತಿದೆ.
ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ.ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಆಗಿನ ಸಿಎಂ ಕುಮಾರಸ್ವಾಮಿ ಬಳಿಗೆ ಹೋದಾಗ ಮನವಿ ಪತ್ರವನ್ನು ಎಸೆದುಬಿಟ್ಟಿದ್ದರು ಎಂದು ಸಂಸದೆ ಸುಮಲತಾ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ದನಿಗೂಡಿಸಿದ್ದ ಹಿರಿಯ ನಟ ದೊಡ್ಡಣ್ಣ, ಅಂಬರೀಶ್ರವರ ಸ್ಮಾರಕ ನಿರ್ಮಾಣಕ್ಕೆ ಕುಮಾರಸ್ವಾಮಿ ಕಾರಣ ಅಲ್ಲ. ಸಿಎಂ ಯಡಿಯೂರಪ್ಪನವರು ಕಾರಣಿಕರ್ತರು ಎಂದು ಹೇಳಿಕೆ ನೀಡಿದ್ದರು. ಈ ಕುರಿತಾಗಿ ಶಾಸಕ ಸಾರಾ ಮಹೇಶ್, ಡಿಸಿ ತಮ್ಮಣ್ಣ ಹಾಗೂ ಸಚಿವ ಕೆ.ಎಸ್ ,ಈಶ್ವರಪ್ಪ ಪ್ರತಿಕ್ರಿಯಿಸಿದ್ದರು.