ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೋರ್ಟ್‌ಗಳಿಗೆ ರಜೆ ನೀಡುವ ಬಗ್ಗೆ ಮಾ.15ಕ್ಕೆ ನಿರ್ಧಾರ.. - ಸಿಜೆಐ ನೇತೃತ್ವದ ಸಭೆ

ಕರುನಾಡಿನಲ್ಲೂ ಕೊರೊನಾ ವೈರಸ್‌ ತಲ್ಲಣವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಕೋರ್ಟ್‌ ಕಲಾಪಗಳಿಗೆ ರಜೆ ನೀಡಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ..

a-p-ranganath-talking-about-corona-virus
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕೋರ್ಟ್ ಗಳಿಗೆ ರಜೆ..?

By

Published : Mar 13, 2020, 11:27 PM IST

ಬೆಂಗಳೂರು :ಕೊರೋನಾ ವೈರಸ್ ತಡೆಗಟ್ಟಲು ರಾಜ್ಯದ ಕೋರ್ಟ್‌ಗಳಿಗೆ ರಜೆ ನೀಡಬೇಕೆ, ಬೇಡವೇ ಎಂಬ ಬಗ್ಗೆ ಮಾ. 15ರಂದು ಹಿರಿಯ ನ್ಯಾಯಮೂರ್ತಿಗಳ ಸಭೆಯಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ತಿಳಿಸಲಿದ್ದಾರೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಹೇಳಿಸಿದ್ದಾರೆ.

ಈ ಕುರಿತಂತೆ ಈಟಿವಿ ಭಾರತ್‌ಗೆ ಪ್ರತಿಕ್ರಿಯಿಸಿದ ಅವರು, ರಜೆ ನೀಡುವ ಇಲ್ಲವೇ ಕಕ್ಷಿದಾರರನ್ನು ಕೋರ್ಟ್‌ನಿಂದ ಹೊರಗಿಟ್ಟು ಕಲಾಪ ನಡೆಸುವ ಅಥವಾ ರಜೆ ನೀಡಬೇಕೆ, ಬೇಡವೇ ಎಂಬ ಬಗ್ಗೆ ಸರ್ಕಾರಕ್ಕೆ ಸಲಹೆ ಕೇಳಲಾಗಿದೆ. ಹೀಗಾಗಿ ನ್ಯಾಯಮೂರ್ತಿಗಳ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ನ್ಯಾ. ಓಕಾ ಅವರು ತಿಳಿಸಿದ್ದಾರೆಂದು ರಂಗನಾಥ್‌ ಹೇಳಿದ್ದಾರೆ.

ABOUT THE AUTHOR

...view details