ಕರ್ನಾಟಕ

karnataka

ETV Bharat / state

ಮೊಬೈಲ್ ನೋಡ್ತಾ ನೋಡ್ತಾ ನರ್ಸ್​ ಮೇಲೆ ಟ್ಯಾಂಕರ್ ಹತ್ತಿಸಿದ ಚಾಲಕ.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ! - ಆಶಾಗೆ ಟ್ಯಾಂಕರ್​ ಡಿಕ್ಕಿ

ಟ್ಯಾಂಕರ್​ ಚಾಲಕನ ನಿರ್ಲಕ್ಷ್ಯದಿಂದಾಗಿ ಮಹಿಳೆ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Woman killed in road accident at Bangalore  Accident captured in CCTV  Bangalore accident news  ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ  ಮಹಿಳೆ ಮೇಲೆ ಟ್ಯಾಂಕರ್ ಹತ್ತಿಸಿದ ಚಾಲಕ  ಟ್ಯಾಂಕರ್​ ಚಾಲಕನ ನಿರ್ಲಕ್ಷ್ಯದಿಂದಾಗಿ ಮಹಿಳೆ ಬಲಿ  ಭಯಾನಕ ಆಕ್ಸಿಡೆಂಟ್ ದೃಶ್ಯವು ಸಿಸಿಟಿವಿಯಲ್ಲಿ ಸೆರೆ  ಆಶಾಗೆ ಟ್ಯಾಂಕರ್​ ಡಿಕ್ಕಿ  ರಾಜಾಜಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಮಹಿಳೆ ಮೇಲೆ ಟ್ಯಾಂಕರ್ ಹತ್ತಿಸಿದ ಚಾಲಕ

By

Published : Sep 6, 2022, 1:12 PM IST

Updated : Sep 13, 2022, 7:55 AM IST

ಬೆಂಗಳೂರು: ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಾರೆ. ಈ ಭಯಾನಕ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆ ಮೇಲೆ ಟ್ಯಾಂಕರ್​ ಹತ್ತಿಸಿದ ಘಟನೆ ಲಗ್ಗೆರೆ ಬಸ್ ನಿಲ್ದಾಣ ಬಳಿಯ ಗ್ರೇಸ್ ಪಬ್ಲಿಕ್ ಸ್ಕೂಲ್ ಮುಂಭಾಗ ಸಂಭವಿಸಿದೆ. ಮೃತರನ್ನು ಆಶಾ ಎಂದು ಗುರುತಿಸಲಾಗಿದೆ.

ಮಹಿಳೆ ಮೇಲೆ ಟ್ಯಾಂಕರ್ ಹತ್ತಿಸಿದ ಚಾಲಕ

ಆಶಾ (32) ಅವರು ಕಿಮ್ಸ್ ಅಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ರು. ಇಂದು ಬೆಳಗ್ಗೆ ಬಸ್ ನಿಲ್ದಾಣ ಕಡೆಯಿಂದ ಲಗ್ಗೆರೆಯಲ್ಲಿರುವ ಮನೆ ಕಡೆಗೆ ತೆರಳುತಿದ್ದರು. ಸ್ಕೂಲ್ ಮುಂದೆ ಬಂದಾಗ ರಸ್ತೆ ಬದಿಯಲ್ಲಿ ಎಡಭಾಗದಲ್ಲಿ ತೆರಳುತ್ತಿದ್ದ ಆಶಾ ಅವರಿಗೆ ಟ್ಯಾಂಕರ್​ ಡಿಕ್ಕಿ ಹೊಡೆದಿದೆ.

ಕಿರಿದಾದ ರಸ್ತೆಯಲ್ಲಿ ಮೊಬೈಲ್ ನೋಡ್ತಾ ನೋಡ್ತಾ ಟ್ಯಾಂಕರ್​ ಚಾಲಕ ಮಹಿಳೆ ಮೇಲೆ ವಾಹನವನ್ನು ಹತ್ತಿಸಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಚಾಲಕ ಟ್ಯಾಂಕರ್​ನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಈ ಘಟನೆ ಕುರಿತು ರಾಜಾಜಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ:ಉದ್ಯಮಿ ಮಿಸ್ತ್ರಿ ಕಾರು ಅಪಘಾತಕ್ಕೂ ಕೆಲ ನಿಮಿಷಗಳ ಹಿಂದಿನ ಸಿಸಿಟಿವಿ ವಿಡಿಯೋ

Last Updated : Sep 13, 2022, 7:55 AM IST

ABOUT THE AUTHOR

...view details