ಕರ್ನಾಟಕ

karnataka

ETV Bharat / state

ಸ್ನೇಹಿತನ ಹಣ ಕೊಡಿಸಲು ಹೋದ ವ್ಯಕ್ತಿಯ ಕೊಲೆ: ಆರೋಪಿ ಪರಾರಿ

Murder in Parappana Agrahara police station area:ಸ್ನೇಹಿತನ ಕೆಲಸದ 1500 ಹಣ ಕೊಡಿಸಲು ಮಧ್ಯಸ್ಥಿಕೆ ವಹಿಸಿದ ವ್ಯಕ್ತಿ ಹತ್ಯೆಯಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Etv Bharat
ಕೊಲೆ

By ETV Bharat Karnataka Team

Published : Dec 7, 2023, 7:27 AM IST

Updated : Dec 7, 2023, 11:30 AM IST

ಮೃತ ಗೋಪಾಲ್ ಸ್ನೇಹಿತ ​ಕರೇಗೌಡನಿಂದ ಘಟನೆ ಬಗ್ಗೆ ಮಾಹಿತಿ

ಬೆಂಗಳೂರು:ಸ್ನೇಹಿತನ ಹಣ ಸಂಧಾನಕ್ಕೆ ಮಧ್ಯಸ್ಥಿಕೆ ಮಾಡಲು ಹೋದ ವ್ಯಕ್ತಿ ಕೊಲೆಯಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ನಡೆದಿದೆ. ಗೋಪಾಲ್​ ಹತ್ಯೆಯಾದ ವ್ಯಕ್ತಿ. ಗಿರೀಶ್​ ಕೊಲೆ ಆರೋಪಿ.

ಘಟನೆ ವಿವರ: ಮೃತ ವ್ಯಕ್ತಿ ಗೋಪಾಲ್​ ಹಾಗೂ ಆತನ ಸ್ನೇಹಿತ ಕರೇಗೌಡ ಮತ್ತು ಶಶಿ ಬಾರ್​ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಈ ವೇಳೆ ಅದೇ ಬಾರ್​ಗೆ ಗಿರೀಶ್​ ಆತನ ಸ್ನೇಹಿತನ ಜೊತೆ ಬಂದಿದ್ದಾನೆ. ಈ ವೇಳೆ, ಗೋಪಾಲ್​ ತನ್ನ ಸ್ನೇಹಿತ ಕರೇಗೌಡನ ಎಲೆಕ್ಟ್ರಿಷಿಯನ್ ಕೆಲಸದ 1500 ರೂ ಹಣ ನೀಡುವಂತೆ ಕೇಳಿದ್ದ. ಇದಕ್ಕೆ ಗಿರೀಶ್​ ಕೊಡುವುದಿಲ್ಲ. ಏನು ಮಾಡಿಕೊಳ್ಳುತ್ತಿಯಾ ಮಾಡಿಕೋ ಎಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಗೋಪಾಲ್​ ಗಿರೀಶ್​ಗೆ ಹೊಡೆದು ಕರೇಗೌಡನ ಹಣವನ್ನು ಕೊಡಿಸಿದ್ದ.

ಇದರಿಂದ ಕೋಪಗೊಂಡ ಗಿರೀಶ್​ ಗೋಪಾಲ್​ ಸ್ನೇಹಿತ ಶಶಿಗೆ ಕರೆ ಮಾಡಿ ನನ್ನ ಮೇಲೆ ಕೈ ಮಾಡಿದ್ದೀರಿ ಅಲ್ವಾ ನಿಮ್ಮನ್ನು ಸುಮ್ಮನೆ ಬಿಡೋದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾನೆ. ಇದಕ್ಕೆ ಮತ್ತೆ ಸಿಟ್ಟಿಗೆದ್ದ ಗೋಪಾಲ್​ ಕರೇಗೌಡ ಮತ್ತು ಶಶಿಯನ್ನು ಕರೆದುಕೊಂಡು ಗಿರೀಶ್ ಮನೆಗೆ ಹೋಗಿದ್ದಾರೆ. ಆ ವೇಳೆ ಗಿರೀಶ್​ನ ಪತ್ನಿ ತಪ್ಪಾಗಿದೆ. ಇದೊಂದು ಸಾರಿ ಬಿಡಿ ಎಂದು ಗೋಪಾಲನ ಬಳಿ ಕೇಳಿಕೊಂಡಿದ್ದಾಳೆ. ಆಗ ಗೋಪಾಲ ಮತ್ತು ಸ್ನೇಹಿತರು ಅವನಿಗೆ ನಾವೇನು ಮಾಡುವುದಿಲ್ಲ. ಆದರೆ ಅವನಿಗೆ ಸರಿಯಾಗಿ ಮಾತನಾಡುವುದನ್ನು ಕಲಿಸಿ ಎಂದು ಹೇಳಿದ್ದಾರೆ.

ಇಲ್ಲಿ ಗಿರೀಶ್​ ಮೊದಲೇ ಅಡುಗೆ ಮನೆಗೆ ತೆರಳಿ ಚಾಕು ತಂದು ತನ್ನ ಬೆನ್ನ ಹಿಂದೆ ಇಟ್ಟುಕೊಂಡಿದ್ದ. ಕುಪಿತಗೊಂಡು ಮಾತನಾಡುತ್ತಿದ್ದ ಗೋಪಾಲನ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತಕ್ಷಣವೇ ಗಾಯಗೊಂಡಿದ್ದ ಗೋಪಲಾನನ್ನು ಸ್ನೇಹಿತರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಗೋಪಾಲ್​ ಸಾವನ್ನಪ್ಪಿದ್ದಾನೆ. ಮಾಹಿತಿ ಪಡೆದ ಪರಪ್ಪನ ಅಗ್ರಹಾರ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ಗಿರೀಶ್​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ಹಳೆ ವೈಷಮ್ಯಕ್ಕೆ ವ್ಯಕ್ತಿ ಕೊಲೆ; ಅಪರಾಧಿಗೆ ಜೀವಾವಧಿ ಶಿಕ್ಷೆ

ಹಿಂದಿನ ಪ್ರಕರಣ:- ಹಳೇ ದ್ವೇಷಕ್ಕೆ ಆಟೋ ಚಾಲಕನ ಹತ್ಯೆ:ಡಿ.5 ರ ತಡರಾತ್ರಿ ಈ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಂಬರ್ ಲೇಔಟ್​ನಲ್ಲಿ ನಡೆದಿತ್ತು. ಹತ್ಯೆಯಾದ ವ್ಯಕ್ತಿ ಅರುಣ್​ ಆಗಿದ್ದು, ಈತ ಎಂದಿನಂತೆ ಕೆಲಸ ಮುಗಿಸಿಕೊಂಡು ಬಂದು ತನ್ನ ಮನೆ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಬಂದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹತ್ಯೆ ಮಾಡಿದ್ದರು. ಈ ಹಿಂದೆ ಮೃತ ಅರುಣ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇದೇ ವೈಷಮ್ಯಕ್ಕೆ ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದು ತನಿಖೆ ನಡೆಯುತ್ತಿದೆ.

Last Updated : Dec 7, 2023, 11:30 AM IST

ABOUT THE AUTHOR

...view details