ಕರ್ನಾಟಕ

karnataka

ETV Bharat / state

ರಸ್ತೆಯಲ್ಲಿ ಜೋರಾಗಿ ಹಾಡು ಹಾಕಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತು: ಟೆಕ್ಕಿಗಳಿಂದ ಥಳಿತ, ವ್ಯಕ್ತಿ ಸಾವು

ಟೆಕ್ಕಿಗಳಿಂದ ಥಳಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಲಾಯೆಡ್ ನೇಮಯ್ಯ ಎಂಬವರು ಸಾವನ್ನಪ್ಪಿದ್ದಾರೆ.

a man who was beaten up by techies died
ಟೆಕ್ಕಿಗಳಿಂದ ಥಳಿತಕ್ಕೊಳಗಾಗಿದ್ದ ವ್ಯಕ್ತಿ ಸಾವು

By

Published : Apr 5, 2023, 4:39 PM IST

ಬೆಂಗಳೂರು:ರಸ್ತೆಯಲ್ಲಿ ಜೋರಾಗಿ ಹಾಕಿದ್ದ ಹಾಡಿನ ಸೌಂಡ್ ಕಡಿಮೆ ಮಾಡಲು‌ ಹೇಳಿದ್ದಕ್ಕೆ ಟೆಕ್ಕಿಗಳಿಂದ ಥಳಿತಕ್ಕೊಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಎಚ್ಎಎಲ್ ಠಾಣಾ ವ್ಯಾಪ್ತಿಯ ವಿಜ್ಞಾನ ನಗರದಲ್ಲಿ ತಡರಾತ್ರಿ ವರದಿಯಾಗಿದೆ. ಲಾಯೆಡ್ ನೇಮಯ್ಯ ಮೃತ ವ್ಯಕ್ತಿ. ಒಡಿಷಾ ಮೂಲದ ರಾಮ್ ಸಮಂತ್ರೆ, ಬಸುದೇವ್ ಸಮಂತ್ರೆ, ಅನಿರುದ್ಧ್ ಸೇರಿದಂತೆ ನಾಲ್ವರ ವಿರುದ್ಧ ಹತ್ಯೆಗೈದ ಆರೋಪ ಕೇಳಿ ಬಂದಿದ್ದು, ಎಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಏಪ್ರಿಲ್ 2 ರಂದು ಬೆಳಗ್ಗಿನ ಜಾವ 4.30ರ ಸುಮಾರಿಗೆ ವಿಜ್ಞಾನ ನಗರದ ಖಾಸಗಿ ಅಪಾರ್ಟ್‌ಮೆಂಟ್ ಮುಂದಿನ ರಸ್ತೆಯಲ್ಲಿ ಜೋರಾದ ಸೌಂಡ್​ನಲ್ಲಿ ಹಾಡು ಹಾಕಿಕೊಂಡಿದ್ದಾಗ, ಲಾಯೆಡ್ ನೇಮಯ್ಯ ಬಂದು 'ಸೌಂಡ್ ಕಡಿಮೆ ಮಾಡಿ, ಮನೆಯಲ್ಲಿ ವಯಸ್ಸಾದವರು ಇದ್ದಾರೆ' ಎಂದು ಹೇಳಿದ್ದರು. ಈ ವೇಳೆ ಲಾಯೆಡ್ ಜೊತೆ ಗಲಾಟೆ ಮಾಡಿದ್ದ ಆರೋಪಿಗಳು ಆತನನ್ನು ಥಳಿಸಿ, ಕಲ್ಲು, ಚಪ್ಪಲಿಗಳಿಂದ ಹಲ್ಲೆ ಮಾಡಿದ್ದರಂತೆ. ಹಲ್ಲೆಗೊಳಗಾದ ಲಾಯೆಡ್ ಮತ್ತು ಆರೋಪಿಗಳು ಎಚ್ಎಎಲ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿದ್ದರು.

ಗಲಾಟೆ ಬಳಿಕ ಅಸ್ಪತ್ರೆಯಲ್ಲಿ ದಾಖಲಾಗಿದ್ದ ಲಾಯೆಡ್ ನೇಮಯ್ಯ ತಡರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಎಚ್ಎಎಲ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಪ್ರಕರಣದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಶಿಂಧೆ ಗುಂಪಿನ ಕಾರ್ಯಕರ್ತರಿಂದ ಉದ್ಧವ್ ಠಾಕ್ರೆ ಗುಂಪಿನ ಮಹಿಳೆ ಮೇಲೆ ಹಲ್ಲೆ

ABOUT THE AUTHOR

...view details