ಬೆಂಗಳೂರು :ಆರ್‌ಟಿನಗರದಲ್ಲಿ ಹುಡುಗಿಯರ ಜೊತೆ ಜಾಲಿ ಮಾಡುತ್ತಾ ರಾಶ್ ಡ್ರೈವಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದ ಲ್ಯಾಂಬೋರ್ಗಿನಿ ಕಾರು ಚಾಲಕನನ್ನು ಸಾರ್ವಜನಿಕರು ಹೊರಗೆಳೆದು ಥಳಿಸಿರುವ ಘಟನೆ ನಡೆದಿದೆ.
ಲ್ಯಾಂಬೋರ್ಗಿನಿಯಲ್ಲಿ ಜಾಲಿ ರೈಡ್ ಮಾಡುತ್ತಿದ್ದವನಿಗೆ ಬಿತ್ತು ಗೂಸಾ.. - RT Nagar in Bangalore
ವಿಡಿಯೋ ನೋಡಿದ ಕಮಿಷನರ್ ಭಾಸ್ಕರ್ ರಾವ್ ಅವರು ಸಂಚಾರಿ ಉತ್ತರ ವಿಭಾಗದ ಡಿಸಿಪಿ ಸಾರ ಫಾತಿಮಾ ಅವರಿಗೆ ಘಟನೆ ಕುರಿತು ಮಾಹಿತಿ ಕಲೆ ಹಾಕುವಂತೆ ಸೂಚಿಸಿದ್ದಾರೆ.
ನಿನ್ನೆ ಖಾಲಿ ರಸ್ತೆಯಲ್ಲಿ ಅತಿವೇಗವಾಗಿ ಕಾರು ಚಾಲಾಯಿಸಿಕೊಂಡು ಬಂದ ಲ್ಯಾಂಬೋರ್ಗಿನಿ ಕಾರು ಚಾಲಕ ಆರ್ ಟಿ ನಗರದ ಬಳಿ ಇರುವ ಅಪಾರ್ಟ್ಮೆಂಟ್‌ನ ಹತ್ತಿರ ನಿಂತಿದ್ದ ಜನರ ಮೇಲೆ ವೇಗ ತಪ್ಪಿ ಡಿಕ್ಕಿ ಹೊಡೆಯಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಸ್ಥಳೀಯರು ಕಾರ್‌ನಲ್ಲಿದ್ದ ವ್ಯಕ್ತಿಯನ್ನ ಹೊರಗೆಳೆದು ಗೂಸಾ ಕೊಟ್ಟು ವಿಡಿಯೋ ಮಾಡಿ ಅದನ್ನು ಬೆಂಗಳೂರು ಪೊಲೀಸರಿಗೆ ಟ್ಟಿಟರ್ ಮುಖಾಂತರ ಪೋಸ್ಟ್ ಮಾಡಿದ್ದಾರೆ.
ವಿಡಿಯೋ ನೋಡಿದ ಕಮಿಷನರ್ ಭಾಸ್ಕರ್ ರಾವ್ ಅವರು ಸಂಚಾರಿ ಉತ್ತರ ವಿಭಾಗದ ಡಿಸಿಪಿ ಸಾರ ಫಾತಿಮಾ ಅವರಿಗೆ ಘಟನೆ ಕುರಿತು ಮಾಹಿತಿ ಕಲೆ ಹಾಕುವಂತೆ ಸೂಚಿಸಿದ್ದಾರೆ. ಸದ್ಯ ಆರೋಪಿ ಎಸ್ಕೇಪ್ ಆಗಿದ್ದು, ಈತ ಪ್ರತಿಷ್ಠಿತ ಉದ್ಯಮಿ ಅನ್ನೋದು ತಿಳಿದು ಬಂದಿದೆ.