ಬೆಂಗಳೂರು: 53 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಭೂಪ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆನಂದ್ ಎಂಬಾತ 53 ಬಾರಿ ನಿಯಮ ಉಲ್ಲಂಘನೆ ಮಾಡಿ, ಫುಡ್ ಡೆಲಿವರಿ ಮಾಡುವ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾನೆ. ಆನಂದ್ ಸಿಗ್ನಲ್ ಜಂಪ್, ಒನ್ ವೇ ಸೇರಿದಂತೆ ಹಲವಾರು ನಿಯಮ ಉಲ್ಲಂಘನೆ ಮಾಡಿದ್ದು, ಈತನ ಮೇಲೆ 52 ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಆಡುಗೋಡಿ ಬಳಿ ಫುಡ್ ಡೆಲಿವರಿ ಮಾಡಲು ತೆರಳುತ್ತಿದ್ದ ವೇಳೆ ಟ್ರಾಫಿಕ್ ಉಲ್ಲಂಘನೆ ಮಾಡಿದ್ದಾನೆ.