ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿ ಗೇಟ್ ಮುಂದೆಯೇ ವಿಷ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ನಡೆದಿದೆ.
ಪೊಲೀಸ್ ಆಯುಕ್ತರ ಕಚೇರಿ ಬಳಿ ವಿಷ ಸೇವಿಸಿ ವ್ಯಕ್ತಿಯಿಂದ ಆತ್ಮಹತ್ಯೆಗೆ ಯತ್ನ ವಿಜಯಪುರ ಮೂಲದ ಸಿದ್ದರಾಮಗೌಡ ಎಂಬುವರು ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಪೊಲೀಸ್ ಆಯುಕ್ತರ ಕಚೇರಿಯ ಬ್ಯಾಕ್ ಗೇಟ್ ಬಳಿ ಬಂದಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ನೋಡನೋಡುತ್ತಿದ್ದಂತೆ ಗದ್ದೆಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿದ್ದಾರೆ. ಇದರಿಂದ ಗಾಬರಿಗೊಂಡ ಪೊಲೀಸ್ ಸಿಬ್ಬಂದಿ ಅವರ ರಕ್ಷಣೆಗೆ ಧಾವಿಸಿದ್ದಾರೆ. ಆದರೆ, ಸಂಪೂರ್ಣ ಅಸ್ವಸ್ಥಗೊಂಡ ಸಿದ್ದರಾಮನಗೌಡ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ವಿಷ ಸೇವಿಸಲು ಕಾರಣ..?:ವರದಕ್ಷಿಣೆ ಕೇಸ್‌ನಲ್ಲಿ ನನ್ನ ಮಗಳಿಗೆ ಅನ್ಯಾಯವಾಗಿದೆ. ಅಮೃತಹಳ್ಳಿ ಪೊಲೀಸರಿಗೆ ದೂರು ಕೊಟ್ಟಿದ್ದರೂ ಸಹ ನ್ಯಾಯ ಒದಗಿಸಿಲ್ಲ. ಪೊಲೀಸರು ಹಣ ಹಾಗೂ ಚಿನ್ನಾಭರಣ ಪಡೆದು ಮೋಸ ಮಾಡಿದ್ದಾರೆ ಎಂದು ಸಿದ್ದರಾಮಗೌಡ ಆರೋಪಿಸಿದ್ದಾರೆ. ವ್ಯಕ್ತಿ ವಿಷ ಸೇವಿಸಿದ ವಿಷಯ ಗೊತ್ತಾಗಿ ಒಂದು ಕ್ಷಣ ಪೊಲೀಸ್ ಸಿಬ್ಬಂದಿ ಶಾಕ್ ಆಗಿದ್ರು. ನಂತರ ಆಟೋ ಮೂಲಕ ಸಿದ್ದರಾಮಗೌಡ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಅಸ್ವಸ್ಥ ಸಿದ್ದರಾಮಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಓದಿ:ಜಾತಿಗೊಬ್ಬ ಸಿಎಂ ಮಾಡಲು ಸಾಧ್ಯವಿಲ್ಲ, ಒಕ್ಕಲಿಗರ ವಿಚಾರದಲ್ಲಿ ಲಕ್ಷ್ಮಣ ರೇಖೆ ದಾಟಬೇಡಿ: ಸಚಿವ ಆರ್. ಅಶೋಕ್