ಕರ್ನಾಟಕ

karnataka

ETV Bharat / state

ಮಾಜಿ ಗೆಳೆಯನ ಕಿರಾತಕ ಬುದ್ಧಿ: ಗೃಹಿಣಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಕೋಟಿಗಟ್ಟಲೆ ವಸೂಲಿ! - bangalore crime news

ವ್ಯಕ್ತಿಯೊಬ್ಬ ತನ್ನ ಗೆಳತಿ ಜೊತೆ ಸೇರಿಕೊಂಡು ಮಾಜಿ ಪ್ರೇಯಸಿಗೆ ಮೋಸ ಮಾಡಿದ್ದಾನೆ. ಆಕೆಯ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಿ ಕೋಟಿಗಟ್ಟಲೆ ಹಣ ವಸೂಲಿ ಮಾಡಿದ್ದಾನೆ.

A man threatens to his former lover and Taking crore of money
ಗೃಹಿಣಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಕೋಟಿಗಟ್ಟಲೆ ವಸೂಲಿ!

By

Published : Nov 14, 2020, 1:27 AM IST

ಬೆಂಗಳೂರು: ಮಾಜಿ ಪ್ರೇಯಸಿಯ ಆಶ್ಲೀಲ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಕೋಟ್ಯಾಂತರ ಹಣವನ್ನು ಲೂಟಿ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ತನ್ನ ಹೆಂಡತಿಯಿಂದ 1.25 ಕೋಟಿ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿರುವುದಾಗಿ ದೂರಿ ಪತಿರಾಯ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಶೀತಲ್ (ಹೆಸರು ಬದಲಿಸಲಾಗಿದೆ) ‌ಹಣ ಕಳೆದುಕೊಂಡ‌ ಮಹಿಳೆ.‌ ಶೀತಲ್​ನ ಮಾಜಿ ಗೆಳೆಯ ಹಾಗೂ ಆತನ ಸ್ನೇಹಿತೆ ಬ್ಲ್ಯಾಕ್ ಮೇಲ್ ಮಾಡಿ ಕೋಟ್ಯಂತರ ರೂಪಾಯಿ‌ ವಸೂಲಿ ಮಾಡಿರುವುದಾಗಿ ಆಪಾದಿಸಿ‌ ನೀಡಿದ‌ ದೂರಿನ ಮೇರೆಗೆ ವೈಟ್ ಫೀಲ್ಡ್ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

ಏನಿದು ಘಟನೆ:

ಬೆಂಗಳೂರಿನ‌‌ ಮೂಲದ ಉದ್ಯಮಿ ಜೊತೆಗೆ ಶೀತಲ್ ಮದುವೆಯಾಗಿದೆ. ಈ ದಂಪತಿ ವೈಟ್ ಫೀಲ್ಡ್ ನಲ್ಲಿ ಸೂಪರ್ ಮಾರ್ಕೆಟ್ ಇಟ್ಟುಕೊಂಡಿದ್ದಾರೆ. ದಂಪತಿಗೆ ಎಂಟು ವರ್ಷದ ಮಗುವಿದೆ. ಮದುವೆ‌ ಮುನ್ನ ಶೀತಲ್ ತನ್ನ ಕಾಲೇಜು ದಿನಗಳಲ್ಲಿ ಮಹೇಶ್ ಎಂಬುವನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಅನಿವಾರ್ಯ ಕಾರಣದಿಂದ ಶೀತಲ್ ಉದ್ಯಮಿ ಜೊತೆ ಮದುವೆಯಾಗಿದ್ದರಿಂದ ಇವರಿಬ್ಬರ ಸಂಬಂಧ ತಪ್ಪಿತ್ತು. ಕಳೆದ ವರ್ಷ ಜುಲೈನಲ್ಲಿ ಮಹೇಶ್ ಶೀತಲ್ ಗೆ ಸಂದೇಶ ರವಾನಿಸಿದ್ದಾನೆ. ಇದಾದ ನಂತರ ಎಂದಿನಂತೆ ಇಬ್ಬರು ಪರಸ್ಪರ ಚಾಟ್ ಮಾಡಿಕೊಂಡಿದ್ದಾರೆ. ನಂತರ ಒಮ್ಮೆ‌ ಮುಖಾಮುಖಿ ಕೂಡ ಆಗಿದ್ದಾರೆ.

ಇದಾದ ಎರಡನೇ ದಿನಕ್ಕೆ ಅನುಶ್ರೀ ಎಂಬ ಮಹಿಳೆ ಶೀತಲ್​ಳನ್ನು ಪರಿಚಯಿಸಿಕೊಂಡಿದ್ದಾಳೆ. ಬಳಿಕ ತಾನು ಮಹೇಶ್​ನ ಗೆಳತಿ ಎಂದು ಹೇಳಿದ್ದಾಳೆ. ಇದೆಲ್ಲಾ ಆದ ಮೇಲೆ ಈ ಮೂವರು ಕೂಡ ಆಗಾಗ ಚಾಟ್‌ ಮಾಡಿ ಕುಷಲೋಪರಿ ವಿಚಾರಿಸಿಕೊಳ್ಳುತ್ತಿದ್ದರಂತೆ. ಶೀತಲ್​ಗೆ ಫೋಟೊ ಕಳುಹಿಸುವಂತೆ ಅನುಶ್ರೀ ಮನವಿ ಮಾಡಿದ್ದಾಳೆ. ಫೋಟೊ ನೀಡಲು ಶೀತಲ್ ನಿರಾಕರಿಸಿದ್ದಾಳೆ. ಇಲ್ಲಿಂದ ಬ್ಲ್ಯಾಕ್‌ ಮೇಲ್ ಆರಂಭವಾಗಿದೆ. ನೀನು ಮಹೇಶ್ ಜೊತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಹಾಗೂ ಫೋಟೊಗಳು ನನ್ನ ಬಳಿಯಿವೆ. ಸೋಷಿಯಲ್ ಮೀಡಿಯಾದಲ್ಲಿ ಹಾಕಬಾರದೆಂದರೆ ಹಣ‌ ನೀಡುವಂತೆ ಪೀಡಿಸಿದ್ದಾಳೆ.

ಇದೇ ರೀತಿ ಕಳೆದ ಒಂದೂವರೆ ವರ್ಷದಿಂದ ಸುಮಾರು 1.25 ಕೋಟಿ‌ ವಸೂಲಿ‌ ಮಾಡಿದ್ದಾಳೆ. ಕಳೆದ ತಿಂಗಳು ಮತ್ತೆ ಹಣ‌‌‌ ಕಳುಹಿಸುವಂತೆ ಬ್ಲಾಕ್ ಮೇಲ್ ಮಾಡಿದ್ದಾಳಂತೆ. ಇದಕ್ಕೆ‌ ಶೀತಲ್ ಮಣಿದಿರಲಿಲ್ಲ. ಅಷ್ಟೊತ್ತಿಗಾಗಲೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಬಗ್ಗೆ ಗಂಡನಿಗೆ ಗೊತ್ತಾಗಿ ಹೆಂಡತಿಯನ್ನು‌ ಪ್ರಶ್ನಿಸಿದಾಗ ನಡೆದ ವಿಚಾರವೆಲ್ಲಾ ವಿವರವಾಗಿ ಹೇಳಿದ್ದಾಳೆ. ಬಳಿಕ ದಂಪತಿ ವೈಟ್ ಫೀಲ್ಡ್ ಠಾಣೆ ಪೊಲೀಸರಿಗೆ‌ ದೂರು ನೀಡಿದ್ದಾರೆ.

ABOUT THE AUTHOR

...view details