ಬೆಂಗಳೂರು: ಪುಡಿರೌಡಿಗಳ ಅಟ್ಟಹಾಸ ನಗರದಲ್ಲಿ ಮುಂದುವರೆದಿದೆ. ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ರಮೇಶ್ ಕುಮಾರ್ ಖಾತ್ರಿ (45) ವರ್ಷ ಕೊಲೆಯಾದ ವ್ಯಕ್ತಿ. ಮೂಲತಃ ಉತ್ತರ ಪ್ರದೇಶದವನಾದ ರಮೇಶ್ ಶ್ರೀರಾಂಪುರದಲ್ಲಿ ಪತ್ನಿ ಜೊತೆ ವಾಸವಾಗಿದ್ದರು. ಬ್ಯಾಟರಾಯನಪುರ ಪೊಲೀಸ್ ಠಾಣೆಯ ಮೈಸೂರು ರಸ್ತೆಯ ಕ್ರೈಸ್ತ ಧರ್ಮೀಯರ ಸಮಾಧಿ ಬಳಿ ರಾತ್ರಿ 10 ಗಂಟೆಗೆ ರಮೇಶ್ ಕುಮಾರ್ ಖಾತ್ರಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಆರೋಪಿಗಳು ಬಂದು ಎದೆಯ ಬಲಭಾಗದ ಪಕ್ಕೆಗೆ ಚಾಕುವಿನಿಂದ ಇರಿದಿದ್ದಾರೆ. ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.