ಕರ್ನಾಟಕ

karnataka

ETV Bharat / state

ಪಾರ್ಟಿಗೂ ಮುನ್ನ ಜಿಗರಿ ದೋಸ್ತಿ.. ಎಣ್ಣೆಯ ನಶೆ ಏರುತ್ತಿದ್ದಂತೆ ಸ್ನೇಹಿತನನ್ನೇ ಹೊಡೆದು ಕೊಂದ ಫ್ರೆಂಡ್​ - ಪಾರ್ಟಿಗೂ ಮುನ್ನ ಜಿಗರಿ ದೋಸ್ತಿ

ಕುಡಿದ ಅಮಲಿನಲ್ಲಿ ಸ್ನೇಹಿತರಿಬ್ಬರ ನಡುವೆ ಕ್ಷುಲ್ಲಕ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಅದರಲ್ಲಿ ಕೋಪಗೊಂಡ ಸ್ನೇಹಿತನೊಬ್ಬ ತನ್ನ ಸ್ನೇಹಿತನಿಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣ ನಡೆದಿದೆ.

KN_BNG_0
ದೊಣ್ಣೆಯಿಂದ ಹೊಡೆದು ಕೊಲೆ

By

Published : Oct 22, 2022, 6:17 PM IST

Updated : Oct 22, 2022, 8:51 PM IST

ಬೆಂಗಳೂರು: ಕುಡಿದ ಅಮಲಿನಲ್ಲಿ ಜೊತೆಗಿದ್ದವನನ್ನೇ ಪಾಪಿಯೊಬ್ಬ ದೊಣ್ಣೆಯಿಂದ ಹೊಡೆದು ಕೊಂದಿರುವ ಘಟನೆ ಸಿಲಿಕಾನ್ ಸಿಟಿಯ ಯಲಚೇನಹಳ್ಳಿಯಲ್ಲಿ ನಡೆದಿದೆ. ಮುಖೇಶ್(35) ಕೊಲೆಯಾದ ವ್ಯಕ್ತಿ. ನಿಖಿಲ್ ಕೊಲೆ ಆರೋಪಿಯಾಗಿದ್ದಾರೆ.

ಈ ಇಬ್ಬರೂ ಬಿಹಾರದಿಂದ ಬೆಂಗಳೂರಿಗೆ ಕೆಲಸ ಅರಸಿ ಬಂದು ಒಟ್ಟಿಗೆ ಟೈಲ್ಸ್ ಕೆಲಸ ಮಾಡಿಕೊಂಡಿದ್ದರು. ಆಗಾಗ ಇಬ್ಬರ ನಡುವೆ ಸಣ್ಣಪುಟ್ಟ ಕಾರಣಗಳಿಗೆ ಜಗಳವಾಗುತ್ತಿತ್ತು. ಹೀಗೆ ಯಲಚೇನಹಳ್ಳಿ ಬಳಿಯ ಕಾಶಿನಗರ ಸರ್ಕಲ್​ನಲ್ಲಿ ಬಿಲ್ಡಿಂಗ್ ಕಾಮಗಾರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ನಿನ್ನೆ ಇಬ್ಬರು ಮದ್ಯ ಸೇವನೆ ಮಾಡಿ ಮಾತನಾಡಲು ಆರಂಭಿಸಿದ್ದರು.

ಈ ವೇಳೆ ಮುಖೇಶ್ ಹಾಗೂ ನಿಖಿಲ್ ನಡುವೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ಕೋಪಗೊಂಡ ನಿಖಿಲ್​ ಕುಡಿದ ಅಮಲಿನಲ್ಲಿ ನಿರ್ಮಾಣ ಹಂತದ ಬಿಲ್ಡಿಂಗ್ ನಲ್ಲಿದ್ದ ದೊಣ್ಣೆ ತೆಗೆದುಕೊಂಡು ಮುಖೇಶ್ ತಲೆಗೆ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಮುಖೇಶ್ ತೀವ್ರ ರಸ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಕುಮಾರಸ್ವಾಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ನಿಖಿಲ್​ನನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಶಾಲೆಯಲ್ಲಿ ಹಣ ಸಂಗ್ರಹಕ್ಕೆ ಸುತ್ತೋಲೆ.. ಅದಕ್ಕೂ ನಮಗೂ ಸಂಬಂಧವೇ ಇಲ್ಲ- ಸಚಿವ ನಾಗೇಶ್

Last Updated : Oct 22, 2022, 8:51 PM IST

ABOUT THE AUTHOR

...view details