ಕರ್ನಾಟಕ

karnataka

ETV Bharat / state

ಎಟಿಎಂ ಸರ್ವೀಸ್​​​ ಹೆಸರಲ್ಲಿ 50 ಲಕ್ಷ ರೂ. ದೋಚಿದ್ದ ಆರೋಪಿಯ ಬಂಧನ

ಎಟಿಎಂ ಮಷಿನ್​​ಗಳಿಗೆ ಹಣ ತುಂಬಿಸುವುದು ಹಾಗೂ ಮಷಿನ್​​ ಸರ್ವೀಸ್​​ ಮಾಡುತ್ತಿದ್ದ ವ್ಯಕ್ತಿಯೋರ್ವ ವಿವಿಧ ಎಟಿಎಂ ಮಷಿನ್​​ಗಳಿಂದ 50 ಲಕ್ಷ ರೂ. ದೋಚಿದ್ದು, ಇದೀಗ ಬ್ಯಾಡರಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ.

A Man Held
ಆರೋಪಿ

By

Published : Nov 12, 2020, 4:33 PM IST

ಬೆಂಗಳೂರು: ಎಟಿಎಂ ಮಷಿನ್​ ಸರ್ವೀಸ್​​​ ಮಾಡುವ ನೆಪದಲ್ಲಿ ಎಟಿಎಂನಿಂದ ಹಣ ಕದಿಯುತ್ತಿದ್ದ ಆರೋಪಿಯೋರ್ವನನ್ನು ಬ್ಯಾಡರಹಳ್ಳಿ‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿನಯ್ ಜೋಗಿ ಬಂಧಿತ ಆರೋಪಿಯಾಗಿದ್ದು, ಸೆಕ್ಯೂರ್ ವ್ಯಾಲ್ಯೂ ಕಂಪನಿಯಲ್ಲಿ ಎಂಟಿಎಂಗಳಿಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದನಂತೆ.‌ ಹಲವು ವರ್ಷಗಳಿಂದ‌‌‌ ಈ ಕೆಲಸ ಮಾಡುತ್ತಿದ್ದ ವಿನಯ್, ಆಗಸ್ಟ್ 24ರಂದು ಗೊಲ್ಲರಹಟ್ಟಿಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ‌ ಮಷಿನ್​ ಸರ್ವೀಸ್​​​ ಮಾಡುವ ಸೋಗಿನಲ್ಲಿ 30 ಲಕ್ಷ ಹಣ ದೋಚಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಇದರಿಂದ ಅನುಮಾನಗೊಂಡ ಕಂಪನಿ ವ್ಯವಸ್ಥಾಪಕರು, ಮರು ದಿನ ಇನ್ನೋರ್ವ ಸಿಬ್ಬಂದಿ ಮೂಲಕ ಪರಿಶೀಲಿಸಿದಾಗ ಹಣ ಕದ್ದಿರುವುದು ಬೆಳಕಿಗೆ ಬಂದಿತ್ತು.‌

ಈ ಸಂಬಂಧ ಕಂಪನಿಯ ಮ್ಯಾನೇಜರ್ ರವಿ, ಪೊಲೀಸರಿಗೆ ದೂರು‌ ನೀಡಿದ್ದರು. ‌ವಂಚನೆ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಒಟ್ಟಾರೆ ವಿವಿಧ ಎಟಿಎಂಗಳಿಂದ 50 ಲಕ್ಷ ರೂಪಾಯಿಗಳನ್ನು ಕಳ್ಳತನ ಮಾಡಿರುವುದಾಗಿ ವಿನಯ್​ ಜೋಗಿ ಒಪ್ಪಿಕೊಂಡಿದ್ದಾನೆ.

ಇನ್ನು ಕದ್ದಿರುವ ಹಣದಲ್ಲಿ 14.50 ಲಕ್ಷ ತಂದೆ-ತಾಯಿಗೆ ನೀಡಿರುವುದಾಗಿಯೂ ಹಾಗೂ 11 ಲಕ್ಷ ರೂ.ಗಳನ್ನು ಸಾಲಗಾರರಿಗೆ ನೀಡಿರುವುದಾಗಿಯೂ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ‌ಇನ್ನುಳಿದ ಹಣವನ್ನು‌ ಜಪ್ತಿ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ‌.

ABOUT THE AUTHOR

...view details