ಬೆಂಗಳೂರು: ರೌಡಿಶೀಟರ್ವೋರ್ವ ಬರ್ಬರವಾಗಿ ಹತ್ಯೆಗೀಡಾಗಿರುವ ಘಟನೆ ತಿಲಕ್ ನಗರದ ಬಿಟಿಪಿ ಲೇಔಟ್ನಲ್ಲಿ ನಡೆದಿದೆ.
ಏನ್ ಸಮಾಚಾರ ಎಂದು ಕೆಣಕಿದ್ದಕ್ಕೆ ರೌಡಿಶೀಟರ್ ಹೆಣವನ್ನೇ ಉರುಳಿಸಿದ್ರು! - undefined
ಬೆಂಗಳೂರಲ್ಲಿ ಮತ್ತೆ ನೆತ್ತರು ಹರಿದಿದೆ. ಏನ್ ಸಮಾಚಾರ ಎಂದು ಕೆಣಕಿದ್ದ ರೌಡಿಶೀಟರ್ನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಿಲಕ್ ನಗರದ ಬಿಟಿಪಿ ಲೇಔಟ್ನಲ್ಲಿ ನಡೆದಿದೆ.

ರಾಜಶೇಖರ್ ಅಲಿಯಾಸ್ ರಾಜೇಶ್ ಕೊಲೆಯಾಗಿರುವ ರೌಡಿಶೀಟರ್. ನಿನ್ನೆ ರಾತ್ರಿ ರಾಜೇಶ್ನನ್ನು ವಿನೋದ್ ಎಂಬಾತ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ನಡೆದಿದ್ದೇನು: ತಿಲಕ್ ನಗರದ ಬಿಟಿಪಿ ಪ್ರದೇಶದಲ್ಲಿ ಊರ ಹಬ್ಬ ನಡೆಯುತ್ತಿತ್ತು. ಈ ವೇಳೆ ವಿನೋದ್ ಹಬ್ಬದ ಮುಂದಾಳತ್ವ ವಹಿಸಿಕೊಂಡಿದ್ದ. ಈ ವೇಳೆ ರಾಜಶೇಖರ್ ಹಾಗೂ ಆತನ ಸ್ನೇಹಿತರು ಏನ್ ಸಮಾಚಾರ ಎಂದು ವಿನೋದ್ನನ್ನ ಕೆಣಕಿದ್ದರು ಎನ್ನಲಾಗ್ತಿದೆ. ಇದರಿಂದ ಕೆರಳಿದ ವಿನೋದ್ ತನ್ನ ಸಹೋದರನಿಗೆ ಈ ವಿಚಾರ ತಿಳಿಸಿದ್ದ. ನಂತರ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ವಿನೋದ್ ಹಾಗೂ ರಾಜಶೇಖರ್ ಜಗಳವಾಡಿದ್ದರು. ಈ ವೇಳೆ ರಾಜಶೇಖರ್ಗೆ ವಿನೋದ್ ಚಾಕುವಿನಿಂದ ಇರಿದಿದ್ದನಂತೆ. ತಕ್ಷಣ ರಾಜಶೇಖರ್ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ. ಈ ಸಂಬಂಧ ತಿಲಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.