ಆನೇಕಲ್: ನಿಧಾನವಾಗಿ ಚಲಿಸುತ್ತಿದ್ದ ಟಿವಿಎಸ್ಗೆ ವೇಗವಾಗಿ ಚಲಿಸುತ್ತಿದ್ದ ಮಾರುತಿ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಆನೇಕಲ್-ಅತ್ತಿಬೆಲೆ ಮುಖ್ಯ ರಸ್ತೆಯ ಜನಾಧನ್ ಶುಭಾ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಸಂಭವಿಸಿದೆ.
ಟಿವಿಎಸ್ ವಾಹನಕ್ಕೆ ಓಮ್ನಿ ಡಿಕ್ಕಿ... ವ್ಯಕ್ತಿ ಸಾವು! - ಬೆಂಗಳೂರು ರಸ್ತೆ ಅಪಘಾತ,
ನಿಧಾನವಾಗಿ ಸಾಗುತ್ತಿದ್ದ ಟಿವಿಎಸ್ ವಾಹನಕ್ಕೆ ಮಾರುತಿ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರ ವಲಯದಲ್ಲಿ ನಡೆದಿದೆ.
ಟಿವಿಎಸ್ ವಾಹನಕ್ಕೆ ಓಮ್ನಿ ಡಿಕ್ಕಿ
ಆನೇಕಲ್ ಕಡೆಯಿಂದ ವೇಗವಾಗಿ ಬಂದ ಮಾರುತಿ ವಾಹನ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿದ್ದ ಟಿವಿಎಸ್ ವಾಹನಕ್ಕೆ ಗುದ್ದಿದೆ. ಎಂ ಮೇಡಹಳ್ಳಿಯ ನಿವಾಸಿ ಮುನಿರಾಜು (48) ತಲೆಗೆ ತೀವ್ರಗಾಯವಾಗಿ ಆನೇಕಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸಿದ್ದಾರೆ.