ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ರೈಲ್ವೆ ಹಳಿಗಳ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೌಟುಂಬಿಕ ಕಲಹ ಹಿನ್ನೆಲೆ: ರೈಲು ಹಳಿ ಮೇಲೆ ಮಲಗಿ ವ್ಯಕ್ತಿ ಆತ್ಮಹತ್ಯೆ - ಯಲಹಂಕದ ಫುಟ್ಪಾತ್
ಯಲಹಂಕದ ಫುಟ್ಪಾತ್ ಮೇಲೆ ಬಾಳೆಹಣ್ಣು ಮಾರಾಟ ಮಾಡ್ತಿದ್ದ ವ್ಯಕ್ತಿ, ರೈಲ್ವೆ ಹಳಿಗಳ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ರೈಲಿನ ಹಳಿ ಮೇಲೆ ಮಲಗಿ ವ್ಯಕ್ತಿ ಆತ್ಮಹತ್ಯೆ
ಯಲಹಂಕದ ಫುಟ್ಪಾತ್ ಮೇಲೆ ಬಾಳೆಹಣ್ಣು ಮಾರಾಟ ಮಾಡ್ತಿದ್ದ ವ್ಯಕ್ತಿ ಲಾಕ್ಡೌನ್ ಆದ ಬಳಿಕ ವ್ಯಾಪಾರವಿಲ್ಲದೇ ಸಂಕಷ್ಟ ಅನುಭವಿಸಿದ್ದ. ಅಷ್ಟೇ ಅಲ್ಲದೆ, ಕುಟುಂಬ ಕಲಹದಿಂದ ಬೇಸತ್ತಿದ್ದ ಈತ ಕಂಠಪೂರ್ತಿ ಕುಡಿದು ರೈಲ್ವೆ ಹಳಿಗಳ ಮೇಲೆ ಮಲಗಿದ್ದಾನೆ. ಈ ವೇಳೆ, ರೈಲು ಈತನ ಮೇಲೆಯೇ ಚಲಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸದ್ಯ ಯಲಹಂಕ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.