ಕರ್ನಾಟಕ

karnataka

ETV Bharat / state

ಹಾಸನದಿಂದ ಬಂದಾತನಿಗೆ ಸೋಂಕು ಶಂಕೆ: 15 ಮಂದಿ ಕ್ವಾರಂಟೈನ್​ಗೆ ನಿರ್ಧಾರ - ಕೊರೊನಾ ಶಂಕೆ

ಎಲೆಕ್ಟ್ರಾನ್ ಸಿಟಿಯ ಫೇಸ್​ 2 ದಲ್ಲಿರುವ ಸೆಂಜೀನ್ ಎಂಬ ಕಂಪನಿಗೆ ಟ್ರೈನಿಂಗ್​ಗೆ ಬಂದಿದ್ದ ವ್ಯಕ್ತಿಗೆ ಕಳೆದ ನಾಲ್ಕು ದಿನಗಳ ಹಿಂದೆ ಪರೀಕ್ಷೆ ನಡೆಸಲಾಗಿತ್ತು. ಇಂದು ರಿಪೋರ್ಟ್ ಬಂದ ಹಿನ್ನೆಲೆಯಲ್ಲಿ ಸೋಂಕಿನ ಶಂಕೆ ವ್ಯಕ್ತಪಡಿಸಲಾಗಿದೆ.

Bangalore
ಸೆಂಜೀನ್

By

Published : Jun 9, 2020, 2:30 PM IST

ಆನೇಕಲ್(ಬೆಂಗಳೂರು):ಹಾಸನದಿಂದ ಬಂದಿದ್ದ ವ್ಯಕ್ತಿಯೋರ್ವನಿಗೆ ಕೊರೊನಾ ಶಂಕೆ ವಿಚಾರವಾಗಿ ಆತನ ಸಂಪರ್ಕದಲ್ಲಿದ್ದ ಹಲವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಎಲೆಕ್ಟ್ರಾನ್ ಸಿಟಿಯ ಫೇಸ್​ 2ನಲ್ಲಿರುವ ಸೆಂಜೀನ್​ ಕಂಪನಿ

ಎಲೆಕ್ಟ್ರಾನ್ ಸಿಟಿಯ ಫೇಸ್​ 2 ದಲ್ಲಿರುವ ಸೆಂಜೀನ್ (Syngene) ಎಂಬ ಕಂಪನಿಗೆ ಟ್ರೈನಿಂಗ್​ಗೆ ಬಂದಿದ್ದ ವ್ಯಕ್ತಿಗೆ ಕಳೆದ ನಾಲ್ಕು ದಿನಗಳ ಹಿಂದೆ ಪರೀಕ್ಷೆ ನಡೆಸಲಾಗಿತ್ತು. ಇಂದು ರಿಪೋರ್ಟ್​ಗಾಗಿ ಕಾಯಲಾಗುತ್ತಿದೆ. ಮುಂಜಾಗೃತ ಕ್ರಮವಾಗಿ ಇದೀಗ ಆತನ ಸಂಪರ್ಕದಲ್ಲಿದ 15ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲು ನಿರ್ಧಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ABOUT THE AUTHOR

...view details