ಬೆಂಗಳೂರು: ಮನೆ ಕೆಲಸಕ್ಕೆಂದು ಕರೆತಂದು ಯುವತಿ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ಎಸಗಿರುವ ಹೇಯ ಕೃತ್ಯ ರಾಜಧಾನಿಯಲ್ಲಿ ನಡೆದಿದೆ.
ಯುವತಿ ಮೇಲೆ ಆತ್ಯಾಚಾರ ಎಸಗಿ ಐರನ್ ಬಾಕ್ಸ್ನಿಂದ ಮನಬಂದಂತೆ ಸುಟ್ಟ ಆರೋಪಿ ಅರೆಸ್ಟ್ - ಅತ್ಯಾಚಾರವೆಸಗಿ ಐರನ್ ಬಾಕ್ಸ್ನಿಂದ ಸುಟ್ಟ ಘಟನೆ
ಮನೆ ಕೆಲಸಕ್ಕೆಂದು ಕರೆತಂದು ಯುವತಿ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ಎಸಗಿರುವ ಹೇಯ ಕೃತ್ಯ ರಾಜಧಾನಿಯಲ್ಲಿ ನಡೆದಿದೆ.
ಯುವತಿ ಮೇಲೆ ಆತ್ಯಾಚಾರ ಎಸಗಿ ಐರನ್ ಬಾಕ್ಸ್ನಿಂದ ಮನಬಂದಂತೆ ಸುಟ್ಟ : ಆರೋಪಿ ಅರೆಸ್ಟ್
ನಗರದ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ. ಹಲವು ದಿನಗಳ ಹಿಂದೆ ಮನೆಗೆಲಸಕ್ಕೆಂದು ಯುವತಿಯೋರ್ವಳನ್ನು ಬಿಹಾರದಿಂದ ರೆಹಬಾರಿಯಾ ಇಸ್ಲಾಮ್ ಪರವೀಜಾ ಎಂಬಾತ ಕರೆತಂದು ಯುವತಿ ಮೇಲೆ ಆತ್ಯಾಚಾರ ನಡೆಸಿ ಐರನ್ ಬಾಕ್ಸ್ನಿಂದ ಮೈ ಮೇಲೆ ಸುಟ್ಟಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗೆ ಹಲವು ತಿಂಗಳಿಂದ ನಿರಂತರ ಹಿಂಸೆ ನೀಡುತ್ತಿದ್ದನಂತೆ. ಸದ್ಯ ಸಂತ್ರಸ್ತೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ದೂರು ನೀಡಿದ ಆಧಾರದ ಮೇಲೆ ಕೋರಮಂಗಲ ಪೊಲೀಸರು ಪರವೀಜಾನನ್ನು ಅರೆಸ್ಟ್ ಮಾಡಿದ್ದಾರೆ.