ಕರ್ನಾಟಕ

karnataka

ETV Bharat / state

ಮಹಿಳೆ ಸ್ನಾನ ಮಾಡುವಾಗ ಕಿಟಿಕಿಯಲ್ಲಿ ಕಣ್ಬಿಟ್ಟ; ರೆಡ್​ ಹ್ಯಾಂಡ್​ ಆಗಿ ಸಿಕ್ಕು ಪರಪ್ಪನ ಅಗ್ರಹಾರ ಸೇರಿದ! - ಆಟೋ ಚಾಲಕ

ಕಳೆದ 2 ತಿಂಗಳಿಂದ ಮಹಿಳೆ ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡುತ್ತಿದ್ದ ಆಸಾಮಿಯನ್ನು ಸ್ಥಳಿಯರು ಹಿಡಿದು ಥಳಿಸಿದ್ದಾರೆ.

ಆಟೋ ಚಾಲಕ ರಮೇಶ್

By

Published : Sep 14, 2019, 10:24 PM IST

ಆನೇಕಲ್: ಮಹಿಳೆ ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡುತ್ತಿದ್ದ ಆಸಾಮಿಯನ್ನು ಹಿಡಿದು ಥಳಿಸಿರುವ ಸ್ಥಳೀಯರು, ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾಯಸಂದ್ರದ ಆಟೋ ಚಾಲಕ ರಮೇಶ್ ಬಂಧಿತ ಆರೋಪಿ, ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ಕಿಟಕಿ ಮೂಲಕ ನೋಡುತ್ತಿದ್ದ. ಇದನ್ನ ಗಮನಿಸಿದ್ದ ಮಹಿಳೆ ಜೋರಾಗಿ ಕಿರುಚಿಕೊಂಡು ಅಕ್ಕಪಕ್ಕದವರಿಗೆ ತಿಳಿಸಿದ್ರು. ಆಕೆಯ ಗಂಡ ಹಾಗೂ ಸ್ಥಳೀಯರು ಆರೋಪಿಯನ್ನು ಹಿಡಿದು ಸಖತ್ ಗೂಸ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಿಳೆ ಸ್ನಾನ ಮಾಡುವ ಮೊದಲು ಮಾಂಗಲ್ಯ ಸರವನ್ನ ಬಿಚ್ಚಿಡುತ್ತಿದ್ರು. ಕೆಲ ದಿನಗಳ ಹಿಂದೆ ಕಿಟಕಿ ಬದಿ ಕೈ ಹಾಕಿದ ಆರೋಪಿ ಮಾಂಗಲ್ಯ ಸರ ದೋಚಿದ್ದ. ಈ ಬಗ್ಗೆ ರಮೇಶ್ ಕುಮಾರ್ ಮೇಲೆ ಅನುಮಾನ ಬಂದು ಮಹಿಳೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನೇ ಮಾಂಗಲ್ಯ ಸರ ಕದ್ದಿರುವುದಾಗಿ ರಮೇಶ್ ಕುಮಾರ್ ಒಪ್ಪಿಕೊಂಡಿದ್ದು, ಕಳೆದ 2 ತಿಂಗಳಿಂದ ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.

ABOUT THE AUTHOR

...view details