ಕರ್ನಾಟಕ

karnataka

ಗಾಳಿ ಸುದ್ದಿಗೆ ತೆರೆ ಎಳೆದ ಪೊಲೀಸರು: ‌ಮೆಟ್ರೋದಲ್ಲಿದ್ದ ಅನುಮಾನಾಸ್ಪದ ವ್ಯಕ್ತಿ ಮೌಲ್ವಿಯಂತೆ!

By

Published : May 11, 2019, 4:38 AM IST

Updated : May 11, 2019, 6:11 AM IST

ಮೆಜೆಸ್ಟಿಕ್ ಮೆಟ್ರೊ‌ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಅನುಮಾನಾಸ್ಪದ ವ್ಯಕ್ತಿ ಮೌಲ್ವಿ ಎಂದು ಉಪ್ಪಾರಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮೆಟ್ರೊದಲ್ಲಿದ್ದ ಅನುಮಾನಾಸ್ಪದ ವ್ಯಕ್ತಿ

ಬೆಂಗಳೂರು: ಮೆಜೆಸ್ಟಿಕ್ ಮೆಟ್ರೊ‌ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಅನುಮಾನಾಸ್ಪದ ವ್ಯಕ್ತಿಯನ್ನು ಉಪ್ಪಾರಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆತ ಹಲಸೂರಿನ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದು, ಆರ್.ಟಿ.ನಗರ ನಿವಾಸಿಯಾಗಿದ್ದಾರೆ. ಮೌಲ್ವಿಯನ್ನ ವಶಕ್ಕೆ ಪಡೆದಿದ್ದ ಉಪ್ಪಾರಪೇಟೆ ಪೊಲೀಸರು ವಿಚಾರಣೆಗೊಳಪಡಿಸಿದ್ದರು.

ಮೆಟ್ರೊದಲ್ಲಿದ್ದ ಅನುಮಾನಾಸ್ಪದ ವ್ಯಕ್ತಿ

ಮೇ 6 ರಂದು ಮೆಟ್ರೋ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ವರ್ತನೆ ತೋರಿದ್ದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಈ ಪೈಕಿ ಓರ್ವ ಗಾಂಧಿನಗರದಲ್ಲಿ ವಾಚ್ ಅಂಗಡಿ ಇಟ್ಟುಕೊಂಡಿದ್ದ ರಿಯಾಜ್ ಅಹಮದ್ ಎಂದು ತಿಳಿದು ಬಂದಿತ್ತು. ಬಳಿಕ ಮತ್ತೋರ್ವ ವ್ಯಕ್ತಿಗಾಗಿ ವಿಶೇಷ ತಂಡ ರಚಿಸಿ ಪೊಲೀಸರು ಹುಡುಕಾಟ ನಡೆಸಿದ್ದರು. ಇದೀಗ ಮೌಲ್ವಿ ಉಪ್ಪಾರಪೇಟೆ ಪೊಲೀಸರ ವಶದಲ್ಲಿದ್ದು, ಸದ್ಯ ಎಲ್ಲ ಆತಂಕಗಳಿಗೂ ತೆರೆಬಿದ್ದಿದೆ.

Last Updated : May 11, 2019, 6:11 AM IST

TAGGED:

ABOUT THE AUTHOR

...view details