ಬೆಂಗಳೂರು:ಮಹಾಮಾರಿ ಕೊರೊನಾ ಭೀತಿ ಇದ್ದರೂ ಬೆಳ್ಳಂ ಬೆಳಗ್ಗೆ ನಗರ ಸ್ವಚ್ಛಗೊಳಿಸುವ ಕೊರೊನಾ ವಾರಿಯರ್ ಬಾಯಾರಿಕೆಯಿಂದ ನೀರು ಕೇಳಿದ್ರೆ ದೂರ ಕಳುಹಿಸಿ ಅವಮಾನ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ನಿವಾಸಿ ಮಹಿಳೆಯೊಬ್ಬರು ಮನೆ ಬಳಿ ಬಂದು ನೀರು ಕೇಳಿದ ಪೌರಕಾರ್ಮಿಕ ಮಹಿಳೆಗೆ ದೂರ ಹೋಗಿ ದೂರ ಹೋಗಿ ಎಂದು ಅಸ್ಪೃಶ್ಯರ ರೀತಿ ವರ್ತನೆ ತೋರಿದ್ದಾರೆ. ಅಲ್ಲದೇ ನೀರು ತೆಗೆದುಕೊಂಡು ಹೋಗಿ ರಸ್ತೆಯಲ್ಲಿಟ್ಟು, ಎತ್ಕೊಂಡು ಹೋಗಿ, ಇಲ್ಲಿರ್ಬೇಡಿ ಅನ್ನುವ ರೀತಿ ಹೇಳಿದ್ದಾರೆ.
ಕೊರೊನಾ ವಾರಿಯರ್ಸ್ನ್ನು ಹೀಯಾಳಿಸಿದ ಮಹಿಳೆ ಕುಡಿಯುವ ನೀರು ಕೈಗೆ ಕೊಡಬಾರದೇ ಎಂದು ಪೌರಕಾರ್ಮಿಕ ಮಹಿಳೆಯರು ಕೇಳಿದ್ರೆ, ಕೊರೊನಾ ಬಂದ್ರೆ ಅಂತ ಅನುಮಾನದಿಂದ ಮಹಿಳೆ ನೋಡಿದ್ದಾರೆ. ಮನೆಯ ಕಸ ಎತ್ತಿಕೊಂಡು ಹೋಗಲು ಅವರೇ ಬೇಕು, ಆದರೆ, ನೀರು ಕೇಳಿದ್ರೆ ಈ ರೀತಿಯ ವರ್ತನೆ ತೋರಿದ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಕೊರೊನಾ ವಾರಿಯರ್ ಆಗಿ ಮನೆ, ಬೀದಿ ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರನ್ನೇ ಕೀಳಾಗಿ ನೋಡಿದ್ದಾರೆ. ಮಹಿಳೆಯ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.