ಬೆಂಗಳೂರು: ಕೆಲ ಖಾಸಗಿ ಆಸ್ಪತ್ರೆಗಳಿಂದ ಎಡವಟ್ಟು ಕೆಲಸಗಳು ಆಗುತ್ತಲೇ ಇರುತ್ತವೆ. ಕೆಲವು ಬೆಳಕಿಗೆ ಬಂದರೆ ಇನ್ನೂ ಕೆಲವು ಹಾಗೇ ಉಳಿದುಬಿಡುತ್ತವೆ. ಇದೀಗ ವೈದ್ಯರ ನಿರ್ಲಕ್ಷ್ಯಕ್ಕೆ ಹೊಟ್ಟೆ ನೋವು ಎಂದು ಆಸ್ಪತ್ರೆ ಸೇರಿದ್ದ ಕೋಮಾ ಸ್ಥಿತಿಗೆ ತಲುಪಿರುವ ಆರೋಪ ಕೇಳಿಬಂದಿದೆ.
ಐದೂವರೆ ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಮಹಿಳೆ.. ಆಸ್ಪತ್ರೆಯಿಂದ 6 ಕೋಟಿ ರೂಪಾಯಿ ಬಿಲ್ ಆರೋಪ - ಬೆಂಗಳೂರು
ಹೊಟ್ಟೆ ನೋವು ಎಂದು ಆಸ್ಪತ್ರೆ ಬಂದಿದ್ದ ಮಹಿಳೆ ಬರೋಬ್ಬರಿ ಐದೂವರೆ ವರ್ಷಗಳಿಂದ ಕೋಮಾ ಸ್ಥಿತಿಗೆ ತಲುಪಿರುವ ವಿಚಿತ್ರ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ಖಾಸಗಿ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಕೋಮಾಕ್ಕೆ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೋಮಾ ಸೇರಿದ ಪೂನಂ
ಹೌದು, ಬರೋಬ್ಬರಿ ಐದೂವರೆ ವರ್ಷಗಳಿಂದ ಮಹಿಳೆ ವೆಂಟಿಲೇಟರ್ನೊಂದಿಗೆ ಇರುವ ಪ್ರಕರಣ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ರೋಗಿಯ ಹೆಸರು ಪೂನಂ. ಈಕೆ ಹೊಟ್ಟೆ ನೋವು ಎಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ಬಂದಿದ್ದು, ಇದೀಗ ವೈದ್ಯರ ಎಡವಟ್ಟಿನಿಂದ ಆಕೆ ಕೋಮಾಗೆ ಹೋಗಿದ್ದಾರೆ ಎಂದು ಅವರ ಪತಿ ರಿಜೇಶ್ ನಾಯರ್ ಆರೋಪಿಸಿದ್ದಾರೆ.
ಈಗಾಗಲೇ 6 ಕೋಟಿ ರೂಪಾಯಿ ಚಿಕಿತ್ಸಾ ಬಿಲ್ ಮಾಡಿದ್ದಾರೆ ಎಂದು ರಿಜೇಶ್ ನಾಯರ್ ದೂರಿದ್ದಾರೆ. ಈ ಸಂಬಂಧ ಪೊಲೀಸರಿಗೆ, ಸಿಎಂಗೆ, ಪಿಎಂಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ರಿಜೇಶ್ ಬೇಸರ ವ್ಯಕ್ತಪಡಿಸಿದ್ದಾರೆ.