ಬೆಂಗಳೂರು:ನಗರದ ಹೊರವಲಯದಆವಲಹಳ್ಳಿ ಠಾಣಾ ವ್ಯಾಪ್ತಿಯ ಮಾರ್ಗೊಂಡನಹಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ. ಮೃತನನ್ನು ರಾಮಮೂರ್ತಿನಗರದ ಬೋವಿ ಕಾಲೋನಿ ನಿವಾಸಿ ಕುಳ್ಳ ವೆಂಕಟೇಶ್ ಎಂದು ಗುರುತಿಸಲಾಗಿದೆ.
ಜಮೀನು ವ್ಯಾಜ್ಯ ಸಂಬಂಧ ಕುಳ್ಳ ವೆಂಕಟೇಶ್ನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ವೆಂಕಟೇಶ್, ಬೈಕ್ನಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಆಟೋ ಡಿಕ್ಕಿ ಹೊಡೆದಿದೆ. ವ್ಯಕ್ತಿ ಕೆಳಗೆ ಬೀಳುತ್ತಿದ್ದಂತೆಯೇ, ಐವರು ದುಷ್ಕರ್ಮಿಗಳ ತಂಡ ಲಾಂಗು - ಮಚ್ಚುಗಳಿಂದ ಮಾರಕ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.