ಕರ್ನಾಟಕ

karnataka

ETV Bharat / state

ಸುಳ್ಯದ ಹರಿಹರ ಪಲ್ಲತಡ್ಕದಲ್ಲಿ ರಾತ್ರಿ ವೇಳೆ ಭಾರಿ ಶಬ್ದ.. ಬೆಚ್ಚಿಬಿದ್ದ ಜನ - A heavy sound in Sulya

ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಭೂಕಂಪನದ ಮಾದರಿಯಲ್ಲೇ ಶಬ್ದ ಕೇಳಿಸಿದ್ದು, ಘಟನೆಯ ಬಗ್ಗೆ ಗ್ರಾಮದಲ್ಲಿ ಭಯದ ವಾತಾವರಣದ ಜೊತೆಗೆ ಈ ಶಬ್ದ ಎಲ್ಲಿಂದ ಬಂತು ಎಂಬ ಕುತೂಹಲವೂ ಮೂಡಿದೆ.

A heavy sound in Sulya
ಸುಳ್ಯದ ಹರಿಹರ ಪಲ್ಲತಡ್ಕದಲ್ಲಿ ರಾತ್ರಿ ವೇಳೆ ಭಾರೀ ಶಬ್ದ..

By

Published : Dec 14, 2020, 5:34 PM IST

ಸುಳ್ಯ:ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ನಿನ್ನೆ ರಾತ್ರಿ ಅಂದಾಜು 10 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಭಾರಿ ಶಬ್ದವೊಂದು ಕೇಳಿ ಬಂದು ಗ್ರಾಮದ ಜನತೆ ಬೆಚ್ಚಿಬಿದ್ದ ಘಟನೆ ನಡೆದಿದೆ.

ಇದನ್ನೂ ಓದಿ:ನಾಲ್ಕು ದಿನಗಳ ಸಾರಿಗೆ ಮುಷ್ಕರ ಅಂತ್ಯ.. ಬಸ್ ಸಂಚಾರ ಪುನಾರಂಭ, ಪ್ರಯಾಣಿಕರು ನಿರಾಳ

ರಾತ್ರಿ ವೇಳೆ ಭಾರಿ ಶಬ್ದ ಕೇಳಿ ಬಂದಿದ್ದು ಜನರು ಭಯಭೀತರಾಗಿದ್ದಾರೆ‌. ಭೂಕಂಪನದ ಮಾದರಿಯಲ್ಲೆ ಶಬ್ದ ಕೇಳಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಶಬ್ದದ ತೀವ್ರತೆಗೆ ಮನೆಯೊಳಗಡೆ ಮಲಗಿದ್ದವರು ಕೂಡ ಎದ್ದು ಹೊರಗಡೆ ಓಡಿ ಬಂದಿದ್ದಾರೆ. ಘಟನೆಯ ಬಗ್ಗೆ ಗ್ರಾಮದಲ್ಲಿ ಭಯದ ವಾತಾವರಣದ ಜೊತೆಗೆ ಈ ಶಬ್ದ ಎಲ್ಲಿಂದ ಬಂತು ಎಂಬ ಕುತೂಹಲವೂ ಮೂಡಿದೆ.

ಈ ವೇಳೆ ಒಂದಷ್ಟು ಮನೆಗಳು ಕಂಪಿಸಿದ್ದು, ಕೆಲ ಮನೆಗಳೂ ಬಿರುಕು ಬಿಟ್ಟಿವೆ ಎಂದು ಹೇಳಲಾಗಿದೆ.

For All Latest Updates

ABOUT THE AUTHOR

...view details