ಬೆಂಗಳೂರು:ನಿನ್ನೆ ಮಧ್ಯರಾತ್ರಿ ಸ್ನೇಹಿತರೊಂದಿಗೆ ಊಟಕ್ಕೆಂದು ಹೋಗುತ್ತಿದ್ದ ಯುವಕನನ್ನು ಗುರಿಯಾಗಿಸಿ ಪುಂಡರ ಗುಂಪೊಂದು ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆಜಾದ್ ನಗರದಲ್ಲಿ ನಡೆದಿದೆ. ಅವಿನಾಶ್ ಎಂಬುವರು ಹಲ್ಲೆಗೊಳಗಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಾಲ್ಕೀಕಿ ನಗರ ನಿವಾಸಿಯಾಗಿರುವ ಅವಿನಾಶ್ ನಿನ್ನೆ ತಡರಾತ್ರಿ ಸ್ನೇಹಿತರೊಂದಿಗೆ ಕಲಾಸಿಪಾಳ್ಯಕ್ಕೆ ಊಟಕ್ಕೆ ಹೋಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಬೈಕ್ಗಳಲ್ಲಿ ಬಂದ ಮಾಸ್ಕ್ ಮತ್ತು ಹೆಲ್ಮೆಟ್ಧಾರಿಗಳು ಹಲ್ಲೆ ಮಾಡಲು ಮುಂದಾಗಿದ್ದಾರೆ. ಗಾಬರಿಯಿಂದ ಅವಿನಾಶ್ ಸ್ನೇಹಿತರು ಕಾಲ್ಕಿತ್ತಿದ್ದಾರೆ. ಆದರೆ ಅವಿನಾಶ್ ಆರೋಪಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.